ರಾಮನಗರ, ಮೈಸೂರಿನಲ್ಲಿ ಚಿರತೆ ಹಾವಳಿ: 9 ಕುರಿ ಬಲಿ

7

ರಾಮನಗರ, ಮೈಸೂರಿನಲ್ಲಿ ಚಿರತೆ ಹಾವಳಿ: 9 ಕುರಿ ಬಲಿ

Published:
Updated:
ರಾಮನಗರ, ಮೈಸೂರಿನಲ್ಲಿ ಚಿರತೆ ಹಾವಳಿ: 9 ಕುರಿ ಬಲಿ

ಮೈಸೂರು/ರಾಮನಗರ: ಕೆಲವು ದಿನಗಳಿಂದ ರಾಜ್ಯದಲ್ಲಿ ಚಿರತೆ ಹಾವಳಿ ಅಧಿಕವಾಗಿದ್ದು, ಜನರ ನಿದ್ದೆಗೆಡೆಸಿದೆ.

ರಾಮನಗರ ತಾಲ್ಲೂಕಿನ ಪೇಟೆ ಕುರುಬರಹಳ್ಳಿ ಗ್ರಾಮದ ಕೊಟ್ಟಿಗೆಗೆ ಸೋಮವಾರ ರಾತ್ರಿ ಚಿರತೆ ನುಗ್ಗಿದ್ದು, 9 ಕುರಿಗಳನ್ನು ಕೊಂದಿದೆ. ಕುರಿಗಳು ಜಯಮ್ಮ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಬಾಳೆಕಾಯಿ ಮಂಡಿ ಹೊಕ್ಕ ಚಿರತೆ, ಸೆರೆ

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಉತ್ತನಹಳ್ಳಿ ಹಾಗೂ ಬಂಡೀಪಾಳ್ಯ ನಡುವೆ ಇರುವ ಬಾಳೆಕಾಯಿ ಮಂಡಿಯೊಳಗೆ ಹೊಕ್ಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ಬಾಳೆಕಾಯಿ ಮಂಡಿಯೂ ರಾಜಣ್ಣ ಎಂಬುವರಿಗೆ ಸೇರಿದ ಈ ಬಾಳೆಕಾಯಿ ಮಂಡಿಯಲ್ಲಿ ಚಿರತೆಯು ನಸುಕಿನಲ್ಲಿ ನುಗ್ಗಿತ್ತು. ಈ ಬಗ್ಗೆ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿರತೆಯ ವಯಸ್ಸು 6ರಿಂದ 7 ವರ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry