‘ತೊಗರಿ ಖರೀದಿ ದಿನಾಂಕ ವಿಸ್ತರಿಸಿ’

7

‘ತೊಗರಿ ಖರೀದಿ ದಿನಾಂಕ ವಿಸ್ತರಿಸಿ’

Published:
Updated:

ಯಾದಗಿರಿ: ‘ತೊಗರಿ ಖರೀದಿ ಮತ್ತು ನೋಂದಣಿ ದಿನಾಂಕಗಳನ್ನು ವಿಸ್ತರಿಸಬೇಕು’ ಎಂದು ಬಿಜೆಪಿ ತೊಗರಿ ಪ್ರಕೋಷ್ಠ ಜಿಲ್ಲಾ ಘಟಕದ ಸಂಚಾಲಕ ಬಸವರಾಜ ಪಾಟೀಲ ಬಿಳ್ಹಾರ ಆಗ್ರಹಿಸಿದ್ದಾರೆ.

‘ಸರ್ಕಾರ ನಿಗದಿಪಡಿಸಿದ ಅವಧಿ ಜ.14ಕ್ಕೆ ಕೇವಲ ಶೇ 20ರಷ್ಟು ಮಾತ್ರ ರೈತರ ತೊಗರಿ ಖರೀದಿಸಲಾಗಿದೆ. ಈಗಾಗಲೇ ಸರ್ಕಾರ ನಿಗದಿಪಡಿಸಿದ ಅವಧಿಯಲ್ಲಿ ನೋಂದಣಿ ಮಾಡಿದ ರೈತರ ಬಾಕಿ ಇರುವ ತೊಗರಿಯನ್ನು ಖರೀದಿ ಮಾಡಲು ಕನಿಷ್ಠ 10 ದಿನ ಬೇಕು. ಇದಲ್ಲದೇ ತಡವಾಗಿ ಕೊಯ್ಲು ಮಾಡಿದ ಬಹುತೇಕ ರೈತರು ನೋಂದಣಿ ಸಹ ಮಾಡಿಲ್ಲ. ಕಾರಣ ನೋಂದಣಿ ಅವಧಿಯನ್ನು ಒಂದು ತಿಂಗಳು ವಿಸ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ. ‘ರೈತರ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry