ಶುಕ್ರವಾರ, ಡಿಸೆಂಬರ್ 6, 2019
24 °C

ರಾಹುಲ್‌ ರಾಜ್ಯ ಪ್ರವಾಸ: ಹುಲಿಗೆಮ್ಮ ದೇವಸ್ಥಾನ, ಗವಿ ಸಿದ್ಧೇಶ್ವರ ಮಠ ಮತ್ತು ಬಂದೇ ನವಾಜ್‌ ದರ್ಗಾಕ್ಕೆ ಭೇಟಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ರಾಹುಲ್‌ ರಾಜ್ಯ ಪ್ರವಾಸ: ಹುಲಿಗೆಮ್ಮ ದೇವಸ್ಥಾನ, ಗವಿ ಸಿದ್ಧೇಶ್ವರ ಮಠ ಮತ್ತು ಬಂದೇ ನವಾಜ್‌ ದರ್ಗಾಕ್ಕೆ ಭೇಟಿ

ಬೆಂಗಳೂರು: ಚುನಾವಣಾ ಪ್ರಚಾರಕ್ಕಾಗಿ ಫೆ.10 ರಿಂದ 13ರವರೆಗೆ ರಾಜ್ಯಕ್ಕೆ ಬರಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ನೀಡುವ ಪ್ರಮುಖ ಧಾರ್ಮಿಕ ಸ್ಥಳಗಳ ಪಟ್ಟಿ ಹೊರಬಿದ್ದಿದೆ.

ರಾಹುಲ್‌ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನ, ಗವಿ ಸಿದ್ಧೇಶ್ವರ ಮಠ ಮತ್ತು ಕಲಬುರ್ಗಿಯ ಖ್ವಾಜಾ ಬಂದೇ ನವಾಜ್‌ ದರ್ಗಾಗಳಿಗೆ ಭೇಟಿ ನೀಡಲಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು.

ಹುಲಿಗಿ ಊರಲ್ಲಿರುವ ಹುಲಿಗೆಮ್ಮ ದೇವಸ್ಥಾನಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ತುಂಗಭದ್ರ ನದಿ ತೀರದಲ್ಲಿರುವ ಈ ದೇವಸ್ಥಾನವು ಜಿಲ್ಲಾಕೇಂದ್ರ ಕೊಪ್ಪಳದಿಂದ 20 ಕಿ.ಮೀ. ದೂರದಲ್ಲಿದೆ. ಈ ದೇವರಿಗೆ ಸಹಸ್ರಾರು ಭಕ್ತರು ನಡೆದುಕೊಳ್ಳುತ್ತಾರೆ.

ಕೊಪ್ಪಳದ ಪೂರ್ವಕ್ಕೆ ಗವಿ ಸಿದ್ಧೇಶ್ವರ ಮಠವಿದೆ. 18 ಶಿವಯೋಗಿಗಳು ಆಗಿಹೋಗಿರುವ ಈ ಮಠವು ಕಾಯಕ, ದಾಸೋಹ ಮತ್ತು ಶಿಕ್ಷಣದ ಮಹತ್ವ ಸಾರುತ್ತಿದೆ. ಪ್ರತಿವರ್ಷ ಜನವರಿ ತಿಂಗಳಲ್ಲಿ ಇಲ್ಲಿ ಜರುಗುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಈ ಜಾತ್ರೆ ನಾಡಿನಾದ್ಯಂತ ಹೆಸರಾಗಿದೆ.

ಸೂಫಿ ಸಂತ ಖ್ವಾಜಾ ಬಂದೇ ನವಾಜ್‌ ದರ್ಗಾವು ಕಲಬುರ್ಗಿ ಜಿಲ್ಲಾಕೇಂದ್ರದಲ್ಲಿದೆ. 14ನೇ ಶತಮಾನದಲ್ಲಿ ಜೀವಿಸಿದ್ದ ಈ ಸಂತರು ಅಂದಿನ ಮತಪಂಥಗಳ ನಡುವೆ ಸಾಮರಸ್ಯ ಮೂಡಿಸಲು ಶ್ರಮಿಸಿದ್ದರು.

ಪ್ರತಿಕ್ರಿಯಿಸಿ (+)