ಶುಕ್ರವಾರ, ಡಿಸೆಂಬರ್ 6, 2019
25 °C

ಚಹಾ, ಉಪಾಹಾರಕ್ಕಾಗಿ ಉತ್ತರಾಖಂಡ ಬಿಜೆಪಿ ಸರ್ಕಾರದಿಂದ ₹ 68.59 ಲಕ್ಷ ಖರ್ಚು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚಹಾ, ಉಪಾಹಾರಕ್ಕಾಗಿ ಉತ್ತರಾಖಂಡ ಬಿಜೆಪಿ ಸರ್ಕಾರದಿಂದ ₹ 68.59 ಲಕ್ಷ ಖರ್ಚು

ಡೆಹ್ರಾಡೂನ್: ಉತ್ತರಾಖಂಡ ಬಿಜೆಪಿ ಸರ್ಕಾರ 9 ತಿಂಗಳ ಅವಧಿಯಲ್ಲಿ ಚಹಾ ಮತ್ತು ಲಘು ಉಪಾಹಾರಕ್ಕಾಗಿ ₹ 68.59 ಲಕ್ಷ ಖರ್ಚು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆ ಅಡಿ ಬೆಳಕಿಗೆ ಬಂದಿದೆ.

ಚಹಾ, ಲಘು ಉಪಾಹಾರಕ್ಕಾಗಿ ಮಾಡಿದ ಖರ್ಚಿನ ಮಾಹಿತಿ ನೀಡುವಂತೆ ಹೇಮಂತ್ ಸಿಂಗ್ ಗೌನಿಯಾ ಎಂಬುವವರು 2017ರ ಡಿಸೆಂಬರ್ 19ರಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಮನವಿ ಸಲ್ಲಿಸಿದ್ದರು.

2017ರ ಮಾರ್ಚ್ 18ರಂದು ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು. ತ್ರಿವೇಂದ್ರ ಸಿಂಗ್ ರಾವತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

‘ಇಲಾಖೆಗಳಿಗೆ ಬರುವ ಅತಿಥಿಗಳು ಮತ್ತು ಇತರರಿಗೆ ಚಹಾ, ಲಘು ಉಪಾಹಾರ ನೀಡುವುದಕ್ಕಾಗಿ ₹68,59,865 ಖರ್ಚು ಮಾಡಲಾಗಿದೆ. ಸಚಿವರು ಮತ್ತು ಇತರ ಅಧಿಕಾರಿಗಳು ಈ ಮೊತ್ತವವನ್ನು ಬಳಸಿದ್ದಾರೆ’ ಎಂದು ಸಿಂಗ್ ಅವರಿಗೆ ಸರ್ಕಾರ ಮಾಹಿತಿ ನೀಡಿದೆ.

ಪ್ರತಿಕ್ರಿಯಿಸಿ (+)