ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ ರಾಜ್ಯದಲ್ಲಿ ಹನ್ನೊಂದು ಮೆಗಾ ಮಾರ್ಟ್‌’

Last Updated 6 ಫೆಬ್ರುವರಿ 2018, 9:18 IST
ಅಕ್ಷರ ಗಾತ್ರ

ಬಳ್ಳಾರಿ: ‘ರಾಜ್ಯದಲ್ಲಿ ಹನ್ನೊಂದು ಮೆಗಾಮಾರ್ಟ್‌ಗಳನ್ನು ತೆರೆಯಲಾಗಿದೆ’ ಎಂದು ಪತಂಜಲಿ ಯೋಗ ಸಮಿತಿ ಮುಖ್ಯಸ್ಥ ಬಾಬಾ ರಾಮದೇವ್ ತಿಳಿಸಿದರು. ನಗರದ ಎಸ್ಪಿ ವೃತ್ತದಲ್ಲಿನ ಪತಂಜಲಿ ಮೆಗಾ ಮಾರ್ಟ್‌ಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ‘ಇಲ್ಲಿನ ಮೆಗಾ ಮಾರ್ಟ್‌ನಲ್ಲಿ 1000 ಉತ್ಪನ್ನಗಳು ಒಂದೇ ಮಳಿಗೆಯಲ್ಲಿ ಗ್ರಾಹಕರಿಗೆ ದೊರೆಯುವಂತೆ ಮಾಡಲಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ 250 ಮೆಗಾ ಸ್ಟೋರ್‌ಗಳನ್ನು ತೆರೆಯಲಾಗಿದೆ. ಮುಂಬೈ, ನವದೆಹಲಿಯಲ್ಲಿ ಹೆಚ್ಚಿನ ಮೆಗಾ ಸ್ಟೋರ್‌ಗಳಿವೆ. ದಕ್ಷಿಣ ಭಾರತದಲ್ಲಿ ಹೈದರಾಬಾದ್, ಚೈನ್ನೈ ಮತ್ತು ಬೆಂಗಳೂರಿನಲ್ಲಿ ಮೆಗಾ ಸ್ಟೋರ್‌ಗಳ ಸಂಖ್ಯೆ ಕಡಿಮೆ ಇದೆ. ಶ್ರೇಷ್ಠ ಗುಣಮಟ್ಟ ಹೊಂದಿದ ಉತ್ಪನ್ನಗಳನ್ನು ಗ್ರಾಹಕರಿಗೆ ಸರಿಯಾದ ಬೆಲೆಯಲ್ಲಿ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಪತಂಜಲಿ ಉತ್ಪನ್ನಗಳನ್ನು ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತಿದೆ. ಇದರಿಂದ ಬರುವ ಲಾಭವನ್ನು ಜನರ ಸೇವೆಗೆ ವಿನಿಯೋಗಿಸಲಾಗುತ್ತದೆ’ ಎಂದರು. ಪತಂಜಲಿ ಯೋಗ ಸಮಿತಿಯ ಕರ್ನಾಟಕ ಪ್ರಭಾರ ಭವರಲಾಲ್ ಆರ್ಯ ಜೀ, ಜಿಲ್ಲಾ ಪ್ರಭಾರ ನಟರಾಜ್, ಯೋಗ ಮಾರ್ಗದರ್ಶಕ ಇಸ್ವಿ ಪಂಪಾಪತಿ, ಕಣೇಕಲ್ ಎರ್ರಿಸ್ವಾಮಿ, ಎಸ್.ಸಿ.ಪುರಾಣಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT