ಶುಕ್ರವಾರ, ಡಿಸೆಂಬರ್ 13, 2019
27 °C

ಬಂಡೀಪುರದಲ್ಲಿ ಮತ್ತೊಂದು ಹುಲಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡೀಪುರದಲ್ಲಿ ಮತ್ತೊಂದು ಹುಲಿ ಸಾವು

ಗುಂಡ್ಲುಪೇಟೆ/ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ವಲಯದ ಹೊಂಗಹಳ್ಳಿ ಬೀಟ್ ಬಳಿ ಸೋಮವಾರ ಗಂಡು ಹುಲಿಯೊಂದರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

‘ಹುಲಿಗೆ 5ರಿಂದ 6 ವರ್ಷ ವಯಸ್ಸಾಗಿದ್ದು, ಇನ್ನೊಂದು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಮೃತಪಟ್ಟಿರಬಹುದು. ದೇಹದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದ್ದಾರೆ.

‘ಆರೇಳು ದಿನಗಳ ಹಿಂದೆಯೇ ಹುಲಿ ಮೃತಪಟ್ಟಿದ್ದು, ದೇಹದ ಬಹುಪಾಲು ಭಾಗ ಕೊಳೆತುಹೋಗಿತ್ತು. ದೇಹದ ಕೆಳಭಾಗದಲ್ಲಿ ಮತ್ತೊಂದು ಹುಲಿ ಗಾಯಗೊಳಿಸಿದ ಕುರುಹುಗಳು ಪತ್ತೆಯಾಗಿವೆ. ಜತೆಗೆ, ಹುಲಿಯ ದೇಹದಲ್ಲಿ ಯಾವುದೇ ಆಹಾರ ಇರಲಿಲ್ಲ. ಹುಲಿಯ ಉಗುರುಗಳು, ಚರ್ಮ ಎಲ್ಲವೂ ಸಿಕ್ಕಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ನಾಗರಾಜ್‌ ತಿಳಿಸಿದ್ದಾರೆ.

ಡಿ. 25ರ ಬಳಿಕ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಮೃತಪಟ್ಟ 4ನೇ ಹುಲಿ ಇದಾಗಿದೆ. ಕಳೆದ ತಿಂಗಳು ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ  2 ಹುಲಿ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಪ್ರತಿಕ್ರಿಯಿಸಿ (+)