‘ಅಳಿವಿನತ್ತ ಜನಪದ ಕಲೆಗಳು’

7

‘ಅಳಿವಿನತ್ತ ಜನಪದ ಕಲೆಗಳು’

Published:
Updated:

ಧಾರವಾಡ: ‘ಆಧುನಿಕತೆಯ ಅಬ್ಬರದಲ್ಲಿ ‍ಪರಂಪರೆಯ ಭಾಗವಾಗಿರುವ ಹಲವು ಕಲೆಗಳು ನಶಿಸುತ್ತಿವೆ. ಅವುಗಳನ್ನು ಉಳಿಸಿ, ಬೆಳೆಸುವುದು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾ ಗೋಂದಳಿ ಸಮಾಜದ ವತಿಯಿಂದ ಏರ್ಪಡಿಸಿದ್ದ ‘ಗೊಂದಳಿಗರ ಹಾಡುಗಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಬದಲಾದ ಸಂದರ್ಭದಲ್ಲಿ ಗೊಂದಲಿಗ ಸಮುದಾಯದ ಯುವಪೀಳಿಗೆ ಈ ಕಲಾ ಪ್ರಕಾರವನ್ನು ತಮ್ಮದಾಗಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ’ ಎಂದು ಅವರು ಹೇಳಿದರು. 

ಎ.ಎಂ.ಮದರಿ, ದೀಪಕ ಚಿಂಚೋರೆ, ಶಂಕರ ಸುಗತೆ, ಡಿ.ವೈ. ಬಗಲೆ, ವಿಶಾಲ ಸುಗತೆ, ನಾಗೆಂದ್ರ ದುಮ್ಮಾಳೆ, ಸುರೇಶ ಗೊಂದಳಿ, ಪ್ರಕಾಶ ಸಿಂಗನಾಥ, ಸತೀಶ ದುಮ್ಮಾಳೆ ಇದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಪ್ಪ ಸುಗತೆಕರ ಅವರಿಗೆ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry