ಮಂಗಳವಾರ, ಡಿಸೆಂಬರ್ 10, 2019
20 °C

ಮಲಯಾಳ ಕವಿಗೆ ಬೆದರಿಕೆ ಒಡ್ಡಿದ ಆರು ಆರ್‌ಎಸ್‌ಎಸ್‌ ಕಾರ್ಯಕರ್ತರ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಲಯಾಳ ಕವಿಗೆ ಬೆದರಿಕೆ ಒಡ್ಡಿದ ಆರು ಆರ್‌ಎಸ್‌ಎಸ್‌ ಕಾರ್ಯಕರ್ತರ ಬಂಧನ

ಕೊಲ್ಲಂ (ಕೇರಳ): ಮಲಯಾಳ ಕವಿ ಕುರೀಪ್ಪುಳ ಶ್ರೀಕುಮಾರ್‌ ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಆರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಕಚೇರಿ ಆದೇಶ ನೀಡಿದೆ.

ಶ್ರೀಕುಮಾರ್‌ ಅವರು ಸೋಮವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮರಳುತ್ತಿದ್ದರು. ಆಗ, ಕೊಟ್ಟುಕ್ಕಲ್‌ ಬಳಿ ಅವರನ್ನು ತಡೆದ ಆರ್‌ಎಸ್‌ಎಸ್‌ ಕಾರ್ಯಕರ್ತರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ಲೇಖಕರು ನೀಡಿದ ದೂರಿನ ಅನ್ವಯ 15 ಆರ್‌ಎಸ್‌ಎಸ್‌ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)