ಸೋಮವಾರ, ಡಿಸೆಂಬರ್ 9, 2019
21 °C

ಶ್ರೇಯಾ ಮದುವೆಯಂತೆ

Published:
Updated:
ಶ್ರೇಯಾ ಮದುವೆಯಂತೆ

ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸರಣಿಯಂತೆ ನಾಯಕಿಯರ ಮದುವೆ ಸುದ್ದಿ ಬರುತ್ತಿದೆ. ಈಗ ಬಹುಭಾಷಾ ನಟಿ ಶ್ರೇಯಾ ಶರಣ್‌ ಅವರ ಸರದಿ. ಗಾಸಿಪ್‌ಗಳನ್ನು ನಂಬುವುದಾದರೆ ಅವರ ವಿವಾಹ ಮಹೋತ್ಸವ ಸದ್ಯದಲ್ಲೇ ರಾಜಸ್ತಾನದಲ್ಲಿ ನಡೆಯಲಿದೆ. ಆದರೆ ವರ ಯಾರು ಎಂಬುದು ಮಾತ್ರ ಇನ್ನೂ ಅಸ್ಪಷ್ಟ.

ಟಾಲಿವುಡ್‌ ಹೀರೊ ರಾನಾ ದಗ್ಗುಬಾಟಿ ಸೇರಿದಂತೆ ಹಲವು ಸೆಲೆಬ್ರಿಟಿಗಳೊಂದಿಗೆ ಶ್ರೇಯಾ ಡೇಟಿಂಗ್‌ ಮಾಡುತ್ತಿರುವ ಸುದ್ದಿ ಹರಿದಾಡುತ್ತಲೇ ಇತ್ತು. ಅದನ್ನು ಪ್ರತಿಬಾರಿಯೂ ಅಲ್ಲಗಳೆಯುತ್ತಿದ್ದರು ಇಲ್ಲವೇ, ‘ನಾವು ಒಳ್ಳೆಯ ಗೆಳೆಯರು’ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೇಳಿಬರುತ್ತಿರುವುದು ಶ್ರೇಯಾ ಅವರ ರಷ್ಯಾ ಮೂಲದ ಸ್ನೇಹಿತನ ಹೆಸರು.

ವೆಸ್ಟ್‌ ಇಂಡೀಸ್ ತಂಡದ ಕ್ರಿಕೆಟರ್‌ ಡ್ವೇಯ್ನ್‌ ಬ್ರೇವೊ ಜತೆ ಹಿಂದೊಮ್ಮೆ ಊಟಕ್ಕೆ ಹೋಗಿದ್ದ ಶ್ರೇಯಾ, ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆಂಬ ಗುಲ್ಲೆದ್ದಿತ್ತು. ಯಥಾಪ್ರಕಾರ ಅದನ್ನೂ ಅಲ್ಲಗಳೆದಿದ್ದರು ಈ ಬೆಡಗಿ. ಇದೀಗ, ಮದುವೆಯಾಗುತ್ತಿದ್ದಾರೆನ್ನಲಾಗಿರುವ ರಷ್ಯಾದ ಸ್ನೇಹಿತ ಯಾರು ಎಂಬುದು ಮಾತ್ರ ಗಾಸಿಪ್‌ ವೀರರಿಗೂ ಗೊತ್ತಾಗದಂತೆ ರಹಸ್ಯ ಕಾಪಾಡಿಕೊಂಡಿದ್ದಾರೆ.

ಶ್ರೇಯಾ ನಟನೆಯ ‘ಗಾಯತ್ರಿ’ ಇದೇ ಒಂಬತ್ತರಂದು ಬಿಡುಗಡೆಯಾಗಲಿದೆ. ಪುರಿ ಜಗನ್ನಾಥ ನಿರ್ದೇಶನದ ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ, ಮೋಹನ್‌ಬಾಬು ಮತ್ತು ವಿಷ್ಣು ಮಂಚು ಪ್ರಮುಖ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)