ಎತ್ತ ಸಾಗುತ್ತಿದ್ದೇವೆ?

7

ಎತ್ತ ಸಾಗುತ್ತಿದ್ದೇವೆ?

Published:
Updated:

ಹೆಣ್ಣನ್ನು ನೇರವಾಗಿ ಎದುರಿಸಲು ಸಾಧ್ಯವಾಗದಿದ್ದಾಗ, ಹೆಚ್ಚಿನ ಗಂಡಸರು ಎತ್ತುವುದೇ ಆಕೆಯ ಶೀಲದ ಪ್ರಶ್ನೆಯನ್ನು. ಅದು ಅವರಿಗೆ ಸಿಗುವ ಅಂತಿಮ ಮತ್ತು ಅವರು ಅಂದುಕೊಂಡಿರುವ ‘ಪರಿಣಾಮಕಾರಿ ಅಸ್ತ್ರ’.

ಈ ಅರ್ಥದಲ್ಲಿ ಚಲನಚಿತ್ರ ನಟ ಜಗ್ಗೇಶ್ ಅವರು ರಮ್ಯಾ ಅವರನ್ನು ನಿಂದಿಸಲು ಬಳಸಿದ ಅಸಭ್ಯ ಭಾಷೆ ಅಚ್ಚರಿಯನ್ನೇನೂ ಉಂಟು ಮಾಡಲಿಲ್ಲ. ‘ನಾಲಗೆ ಕುಲವನ್ನು ಹೇಳಿತು’ ಎಂಬಂತೆ ಅದು ಅವರ ಸಂಸ್ಕಾರಕ್ಕೆ ಕನ್ನಡಿ ಹಿಡಿಯಿತು. ಕಳಂಕ ತಟ್ಟಿದ್ದು ರಮ್ಯಾ ಅವರಿಗಲ್ಲ, ಜಗ್ಗೇಶ್ ಅವರಿಗೆ.

ಆದರೆ ಅಚ್ಚರಿ ಮತ್ತು ವಿಷಾದ ಉಂಟು ಮಾಡಿದ್ದು, ಪಲ್ಲಂಗದ ವಿಷಯ ಎತ್ತಿಕೊಂಡು ಒಬ್ಬ ಹೆಣ್ಣುಮಗಳನ್ನು ಪುರುಷನೊಬ್ಬ ಅವಮಾನಿಸಿದಾಗ, ಹೆಣ್ಣಿನ ಗೌರವವನ್ನು ಎತ್ತಿಹಿಡಿಯಬೇಕಾದ ಸಭ್ಯ ಸಮಾಜದ ಸಾಕ್ಷಿಪ್ರಜ್ಞೆಯ ರೀತಿಯಲ್ಲಿ ವರ್ತಿಸಬೇಕಾದ ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ಸುದ್ದಿವಾಹಿನಿಗಳು ಜಗ್ಗೇಶ್ ಬಳಸಿದ ಭಾಷೆ ಸರಿ ಎಂಬಂಥ ನಿಲುವನ್ನು ತೆಗೆದುಕೊಂಡು, ಯಾವ ಅಪರಾಧಿ ಭಾವವೂ ಇಲ್ಲದೆ ಸುದ್ದಿ ಪ್ರಸಾರ ಮಾಡಿದ್ದು. ಇದು ನಮ್ಮ ಸಮಾಜ ಚಲಿಸುತ್ತಿರುವ ದಿಕ್ಕನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ನಿಜಕ್ಕೂ ಬೇಸರದ ಸಂಗತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry