ದೈವ ಮತ್ತು ದಿರಿಸು

7

ದೈವ ಮತ್ತು ದಿರಿಸು

Published:
Updated:

ತಮಿಳುನಾಡಿನ ಮಯಿಲಾದುತುರೈನಲ್ಲಿ ದೇವತಾ ವಿಗ್ರಹಕ್ಕೆ ‘ಚೂಡಿದಾರ್ ಅಲಂಕಾರ’ ಮಾಡಿ ಮಂಗಳಾರತಿ ಬೆಳಗಿದ ಕಾರಣಕ್ಕೆ ದೇವಾಲಯದ ಮಂಡಳಿಯವರು ಇಬ್ಬರು ಪೂಜಾರಿಗಳನ್ನು ಅಮಾನತುಗೊಳಿಸಿರುವುದು ವರದಿಯಾಗಿದೆ.

ಪೂಜಾರಿಗಳ ಹೊಸತನದ ತುಡಿತ ಹಾಗೂ ಆಡಳಿತ ಮಂಡಳಿ ಶಿಸ್ತು ಕ್ರಮ, ಎರಡೂ ಸರಿಯೂ ಹೌದು; ತಪ್ಪೂ ಹೌದು!

ನಗರದ ನಿವಾಸಿಗಳು, ನಗರ ಹೃದಯ ಭಾಗದಲ್ಲಿರುವ ತಮ್ಮ ಮನೆಗಳನ್ನು ಉತ್ತರ ಭಾರತದಿಂದ ಬಂದ ವ್ಯಾಪಾರಿಗಳಿಗೆ ದುಬಾರಿ ಬಾಡಿಗೆಗೋ, ಸ್ವಂತಕ್ಕೋ ಕೊಟ್ಟು ಹೊರವಲಯಕ್ಕೆ ಹೋಗಿ ವಾಸಿಸುವುದು ಸಾಮಾನ್ಯವಾಗಿದೆ. ಹೀಗಿರುವಾಗ ಸ್ಥಳೀಯ ದೈವ-ದೇವತೆಯರನ್ನೂ ಆ ಸಾಹುಕಾರರ ಪದ್ಧತಿ, ಅಭಿರುಚಿಗೆ ತಕ್ಕಂತೆ ಅಲಂಕರಿಸಿ, ಹೆಚ್ಚು ಕಾಸು ಮಾಡಿಕೊಳ್ಳುವುದು ತಪ್ಪಾಗುತ್ತದೆಯೇ? ಹಣ ಸಂಪಾದನೆಯ ದೃಷ್ಟಿಯಿಂದ ಇದು ಸರಿಯೇ!

ಆದರೆ, ದೇವಾಲಯಗಳು ಆದಾಯ ತರುವ ಉದ್ಯಮಕ್ಕಿಂತ ಹೆಚ್ಚಾಗಿ, ಪರಂಪರೆ ಮತ್ತು ಸ್ಥಳೀಯ ಸಂಸ್ಕೃತಿಯ ಕೇಂದ್ರಗಳೆಂದಾದರೆ, ಇಂಥ ಬದಲಾವಣೆ ಅದಕ್ಕೆ ಮಾರಕವಾಗುತ್ತದೆ. ದೇವಾಲಯ ಆಡಳಿತ ಮಂಡಳಿಯವರು ಎಲ್ಲಾ ಆಯಾಮಗಳನ್ನು ಪರಿಗಣಿಸಿ, ಪೂಜಾರಿಗಳ ಮೇಲೆ ಕ್ರಮ ಜರುಗಿಸಿರುವುದಾದರೆ ಸ್ವಾಗತಾರ್ಹ. ವಜಾ ಮಾಡಿರುವ ಕ್ರಮದ ಹಿಂದೆ ಕಂದಾಚಾರ ಮಾತ್ರ ಇದ್ದರೆ ಅದು ಸರಿಯಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry