ಪೊಲೀಸ್ ಸಿಬ್ಬಂದಿ ವರ್ಗಾವಣೆ ನಿಯಮ ತಿದ್ದುಪಡಿ: ಸಚಿವ ರೆಡ್ಡಿ

7

ಪೊಲೀಸ್ ಸಿಬ್ಬಂದಿ ವರ್ಗಾವಣೆ ನಿಯಮ ತಿದ್ದುಪಡಿ: ಸಚಿವ ರೆಡ್ಡಿ

Published:
Updated:

ಬೆಂಗಳೂರು:  ಎರಡು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಪೊಲೀಸ್ ಸಿಬ್ಬಂದಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪೊಲೀಸ್ ಸಿಬ್ಬಂದಿ ಮಂಡಳಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ಮಂಗಳವಾರ ಹೇಳಿದರು.

ಸುಪ್ರೀಂಕೋರ್ಟ್‌ ನಿರ್ದೇಶನದ ಅನುಸಾರ ಮಂಡಳಿ ಅನುಷ್ಠಾನಕ್ಕೆ ತರಲಾಗಿದೆ. ಒಂದೇ ಹುದ್ದೆಯಲ್ಲಿ ಎರಡು ವರ್ಷ ಕೆಲಸ ನಿರ್ವಹಿಸಿದವರನ್ನು ಮಾತ್ರ ವರ್ಗಾವಣೆ ಮಾಡಬಹುದು ಎಂಬ ನಿಯಮ ರೂಪಿಸಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದನ್ನು ಒಂದು ವರ್ಷಕ್ಕೆ ಇಳಿಸಲಾಗಿದೆ. ಒಂದೇ ವರ್ಷದಲ್ಲಿ ಪೊಲೀಸ್‌ ಸಿಬ್ಬಂದಿ ವರ್ಗಾವಣೆ ಮಾಡುತ್ತಿರುವುದರಿಂದಾಗಿ ‍ಪ್ರಕರಣಗಳ ತನಿಖೆಯಲ್ಲಿ ಹಿನ್ನಡೆಯಾಗುತ್ತಿದೆ. ಹೀಗಾಗಿ ಬದಲಾವಣೆ ಮಾಡುವ ಚಿಂತನೆಯಿದ್ದು, ತಿದ್ದುಪಡಿ ಮಸೂದೆಯನ್ನು ಸದ್ಯವೇ ಮಂಡಿಸಲಾಗುವುದು ಎಂದೂ ಅವರು ಹೇಳಿದರು.

‘ನಾನು ಗೃಹ ಸಚಿವನಾಗಿದ್ದಾಗ ಎರಡು ವರ್ಷಕ್ಕೆ ಸೀಮಿತಗೊಳಿಸಿ ನಿಯಮ ರೂಪಿಸಲಾಗಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಒಂದು ವರ್ಷಕ್ಕೆ ಇಳಿಸಿದರು’ ಎಂದು ಬಿಜೆಪಿಯ ಆರ್. ಅಶೋಕ್‌ ಹೇಳಿದರು.

ಈ ಹಂತದಲ್ಲಿ ಸಚಿವರು, ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ನಾಳೆ ಸ್ಪಷ್ಟ ಪಡಿಸುವುದಾಗಿ ಸಚಿವ ರೆಡ್ಡಿ ಸದನಕ್ಕೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry