ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪಣಿ ಪರೀಕ್ಷೆ ನಡೆಸಿದ ಚೀನಾ

Last Updated 6 ಫೆಬ್ರುವರಿ 2018, 19:27 IST
ಅಕ್ಷರ ಗಾತ್ರ

ಬೀಜಿಂಗ್‌: ನೆಲಮಟ್ಟದಿಂದ ಉಡಾಯಿಸುವ ಮಧ್ಯಮ ಶ್ರೇಣಿ ಕ್ಷಿಪಣಿ ಪರೀಕ್ಷೆಯನ್ನು ಚೀನಾ ಮಂಗಳವಾರ ಯಶಸ್ವಿಯಾಗಿ ನಡೆಸಿದೆ.

ಭಾರತದ ಅಣ್ವಸ್ತ್ರ ಹೊತ್ತೊಯ್ಯುವ ಖಂಡಾಂತರ ಅಗ್ನಿ–1 ಕ್ಷಿಪಣಿ ಪರೀಕ್ಷೆ ನಡೆಸಿದ ದಿನವೇ ಚೀನಾ ಈ ಕ್ಷಿಪಣಿ ಪರೀಕ್ಷೆ ನಡೆಸಿದೆ.

‘ಚೀನಾ ತನ್ನ ಗಡಿಯೊಳಗೆ ಈ ಪರೀಕ್ಷೆ ಮಾಡಿದ್ದು, ‘ನಿರೀಕ್ಷಿತ ಗುರಿ’ ತಲುಪಿದ್ದೇವೆ’ ಎಂದು ರಾಷ್ಟ್ರೀಯ ರಕ್ಷಣಾ ಸಚಿವಾಲಯ ಹೇಳಿದೆ. ಆದರೆ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

‘ದೇಶದ ಭದ್ರತೆ ದೃಷ್ಟಿಯಿಂದ ಈ ಪರೀಕ್ಷೆ ನಡೆದಿದೆಯೇ ಹೊರತು ಯಾವುದೇ ದೇಶವನ್ನು ಗುರಿಯಾಗಿರಿಸಿಕೊಂಡು ಮಾಡಿಲ್ಲ’ ಎಂದು ಚೀನಾ ತಿಳಿಸಿದೆ. ಚೀನಾವು 2010ರಲ್ಲಿ ಮೊದಲ ಬಾರಿಗೆ ಮಧ್ಯಮ ಶ್ರೇಣಿ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಎರಡನೇ ಬಾರಿಗೆ 2013 ರಲ್ಲಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT