ಮಂಗಳವಾರ, ಡಿಸೆಂಬರ್ 10, 2019
20 °C

ಚಿನ್ನದ ಬೆಲೆ 10 ಗ್ರಾಂ.ಗೆ ₹195 ಏರಿಕೆ

Published:
Updated:
ಚಿನ್ನದ ಬೆಲೆ 10 ಗ್ರಾಂ.ಗೆ ₹195 ಏರಿಕೆ

ಮುಂಬೈ: ಸಂಗ್ರಹಕಾರರು ಮತ್ತು ಚಿನ್ನಾಭರಣ ವರ್ತಕರಿಂದ ಬೇಡಿಕೆ ಹೆಚ್ಚಿದ್ದರಿಂದ ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಮಂಗಳವಾರ ಪ್ರತಿ 10 ಗ್ರಾಂಗಳಿಗೆ ₹ 195 ಹೆಚ್ಚಳ ಕಂಡಿತು.

ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗಿದೆ.

ಆಭರಣ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗಳಿಗೆ ₹ 30,500ಕ್ಕೆ ಮತ್ತು ಅಪರಂಜಿ ಚಿನ್ನವು ₹ 30,650ಕ್ಕೆ ಹೆಚ್ಚಳಗೊಂಡಿದೆ.

ಬೆಳ್ಳಿ ಬೆಲೆಯು ಕೂಡ ಪ್ರತಿ ಕೆಜಿಗೆ ₹ 45ರಂತೆ ಹೆಚ್ಚಳ ಕಂಡು ₹ 38,775ಕ್ಕೆ ತಲುಪಿದೆ.

ಪ್ರತಿಕ್ರಿಯಿಸಿ (+)