ದೊಣ್ಣೆಯಿಂದ ಹೊಡೆದು ತಾಯಿ ಹತ್ಯೆ

7

ದೊಣ್ಣೆಯಿಂದ ಹೊಡೆದು ತಾಯಿ ಹತ್ಯೆ

Published:
Updated:

ಬೆಂಗಳೂರು: ಬಾಗಲಕುಂಟೆಯಲ್ಲಿ ಮುನಿಯಮ್ಮ (55) ಎಂಬುವರನ್ನು ಕೊಲೆ ಮಾಡಿದ ಆರೋಪದಡಿ, ಅವರ ಮಗ ಸಂತೋಷ್ ಕುಮಾರ್‌ನನ್ನು (23) ಪೊಲೀಸರು ಬಂಧಿಸಿದ್ದಾರೆ.

ಮುನಿಯಮ್ಮ ಅವರ ಪತಿ ತೀರಿಕೊಂಡಿದ್ದರು. ಮದ್ಯ ಹಾಗೂ ಮಾದಕ ವಸ್ತುವಿನ ವ್ಯಸನಿ ಆಗಿದ್ದ ಮಗ, ತಾಯಿ ಜತೆ ಜಗಳ ಮಾಡುತ್ತಿದ್ದ. ಭಾನುವಾರ ರಾತ್ರಿ ಮನೆಗೆ ಬಂದಿದ್ದ ಆತ, ಕುಡಿಯಲು ಹಣ ಕೇಳಿದ್ದ.  ಕೊಡದಿದ್ದಕ್ಕೆ ತಾಯಿ ಮುಖಕ್ಕೆ ಗುದ್ದಿ, ದೊಣ್ಣೆಯಿಂದ ಹೊಡೆದಿದ್ದ. ಆಗ

ಅವರು ಪ್ರಜ್ಞೆ ತಪ್ಪಿದ್ದರು.

ಸೋಮವಾರ ಬೆಳಿಗ್ಗೆ ಎಚ್ಚರವಾಗಿದ್ದ ತಾಯಿಯನ್ನು ಆರೋಪಿ ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ಮನೆಯಿಂದ ಹೊರಗಡೆ ಹೋಗಿದ್ದ ಆತ ವಾಪಸ್‌ ಬಂದಿರಲಿಲ್ಲ. ಹೀಗಾಗಿ ಮನೆಯಲ್ಲೇ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry