ಬುಧವಾರ, ಡಿಸೆಂಬರ್ 11, 2019
26 °C
ಅಮೆರಿಕದ ಸಿಐಆರ್‌ಇಎಸ್‌ ಅಧ್ಯಯನ ವರದಿ

ಆಟಿಕೆಗಳಿಂದ ಗ್ರಹಿಕಾ ಸಾಮರ್ಥ್ಯ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ಆಟಿಕೆಗಳಿಂದ ಗ್ರಹಿಕಾ ಸಾಮರ್ಥ್ಯ ಹೆಚ್ಚಳ

ವಾಷಿಂಗ್ಟನ್: ಬಾಲ್ಯದಲ್ಲಿ ಕೆಲವೊಂದು ವಿಡಿಯೊ ಗೇಮ್‌ಗಳು ಸೇರಿದಂತೆ ಆಟಿಕೆಗಳನ್ನು ಆಡುವುದರಿಂದ ಗಣಿತ, ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಂತಹ ಕೋರ್ಸ್‌ಗಳ ಅಧ್ಯಯನಕ್ಕೆ ಬೇಕಾದ ಗ್ರಹಿಕಾ ಸಾಮರ್ಥ್ಯ ಬೆಳೆಯುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

‘ಶಾಲೆಗೆ ಸೇರಿಸುವ ಮುನ್ನ ಮಕ್ಕಳಿಗೆ ಗ್ರಹಿಸುವ, ಯೋಚಿಸುವ, ಒಂದಕ್ಕೊಂದು ಜೋಡಿಸುವ ಆಟಿಕೆಗಳನ್ನು ಆಡುವ ಕುರಿತು ತರಬೇತಿ ನೀಡುವುದು ಅತಿ ಮುಖ್ಯ. ಇದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ನಂತಹ ವಿಷಯಗಳ ಅಧ್ಯಯನಕ್ಕೆ ಬೇಕಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ’ ಎಂದು ಅಮೆರಿಕದ ಕೋ–ಆಪರೇಟಿವ್‌ ಇನ್‌ಸ್ಟಿಟ್ಯೂಟ್‌ ಫಾರ್ ರಿಸರ್ಚ್‌ ಇನ್ ಎನ್‌ವಿರಾನ್‌ ಮೆಂಟಲ್‌ ಸೈನ್ಸಸ್‌ನ (ಸಿಐಆರ್‌ಇಎಸ್‌) ಆ್ಯನೆ ಗೋಲ್ಡ್‌ ತಿಳಿಸಿದ್ದಾರೆ.

ಅಮೆರಿಕದ ಕೊಲರಾಡೊ ಬೌಲ್ಡರ್ ವಿಶ್ವವಿದ್ಯಾಲಯ ಮತ್ತು ಕಾರ್ಲ್‌ಟನ್‌ ಕಾಲೇಜಿನ ಸಂಶೋಧಕರು ಗ್ರಹಿಕಾ ಸಾಮರ್ಥ್ಯದ ಪರೀಕ್ಷೆ ನಡೆಸಿದ್ದರು. ಶೈಕ್ಷಣಿಕ ತರಬೇತಿ ಮತ್ತು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ತಾರ್ಕಿಕ ಸಾಮರ್ಥ್ಯ ಹೆಚ್ಚಿಸುತ್ತವೆ ಎಂದು ಆ್ಯನೆ ಗೋಲ್ಡ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)