ವಿಶ್ವದ ಪ್ರಮುಖ ಪೇಟೆಯಲ್ಲೂ ತಲ್ಲಣ

7

ವಿಶ್ವದ ಪ್ರಮುಖ ಪೇಟೆಯಲ್ಲೂ ತಲ್ಲಣ

Published:
Updated:

ಲಂಡನ್‌: ಸತತ ನಾಲ್ಕನೇ ದಿನವೂ ಜಾಗತಿಕ ಷೇರುಪೇಟೆಗಳಲ್ಲಿ ಕುಸಿತ ಕಂಡು ಬರುತ್ತಿದೆ. ಅಮೆರಿಕದ ಬಾಂಡ್‌ಗಳ ಮೇಲಿನ ಹೂಡಿಕೆಯಿಂದ ಬರುವ ಲಾಭವು ಏರುಗತಿಯಲ್ಲಿ ಇರುವುದೇ ಇದಕ್ಕೆ ಮುಖ್ಯ ಕಾರಣ.

ಬಾಂಡ್‌ ಲಾಭವು ನಾಲ್ಕು ವರ್ಷಗಳಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇದೆ. ಅಮೆರಿಕದ ಆರ್ಥಿಕತೆಯಲ್ಲಿ ಚೇತರಿಕೆ ಲಕ್ಷಣ ಕಂಡುಬರುತ್ತಿದೆ. ಇದರಿಂದ ಹಣದುಬ್ಬರ ಮತ್ತು ಸಾಲದ ವೆಚ್ಚ ಏರಿಕೆಯಾಗುವ ಆತಂಕವು ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಮೆರಿಕದ ಷೇರುಪೇಟೆ 6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರಿ ಕುಸಿತ ಕಂಡಿದೆ.

ಬಾಂಡ್‌ ಲಾಭ ಹೆಚ್ಚಳ: ಹಣದುಬ್ಬರ ಹೆಚ್ಚಲಿದೆ ಎಂದು ನಿರೀಕ್ಷಿಸಿದಾಗ, ಬಡ್ಡಿ ದರಗಳು ಏರುತ್ತವೆ. ಬಾಂಡ್‌ಗಳ ಮೇಲಿನ ಹೂಡಿಕೆ ಲಾಭವೂ ಹೆಚ್ಚಳಗೊಳ್ಳುತ್ತದೆ. ಇದು ಷೇರುಗಳ ಬೆಲೆ ಕುಸಿತಕ್ಕೆ ಕಾರಣವಾಗುತ್ತದೆ. ಬಾಂಡ್‌ಗಳ ಮೇಲಿನ ಹೂಡಿಕೆಯ ಲಾಭ ಕಡಿಮೆಯಾದರೆ ಷೇರುಪೇಟೆ ಏರುಗತಿಯಲ್ಲಿ ಸಾಗುತ್ತದೆ.

ಬಾಂಡ್‌ಗಳ ಮೇಲಿನ ಹೂಡಿಕೆಯ ಲಾಭವು ಭವಿಷ್ಯದ ಆರ್ಥಿಕ ಚಟುವಟಿಕೆಗಳ ಬಗ್ಗೆ ಮುನ್ಸೂಚನೆಯನ್ನೂ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry