ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಬ್ಯಾಡ್ಮಿಂಟನ್‌ ತಂಡ ಚಾಂಪಿಯನ್‌ಷಿಪ್‌: ಸಿಂಧು ಆಟಕ್ಕೆ ಒಲಿದ ಜಯ

Last Updated 6 ಫೆಬ್ರುವರಿ 2018, 19:48 IST
ಅಕ್ಷರ ಗಾತ್ರ

ಅಲೋರ್‌ ಸೆಟರ್‌, ಮಲೇಷ್ಯಾ: ಪಿ.ವಿ. ಸಿಂಧು ಅವರ ಚುರುಕಿನ ಆಟದ ಬಲದಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ತಂಡ ಚಾಂಪಿಯನ್‌ಷಿಪ್‌ ನಲ್ಲಿ 3–2ರಲ್ಲಿ ಹಾಂಕಾಂಗ್ ಎದುರು ಜಯಭೇರಿ ಮೊಳಗಿಸಿತು.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ ಸಿಂಧು 21–12, 21–18ರಲ್ಲಿ ಯಿಪ್‌ ಪುಯಿ ಯಿನ್‌ ಅವರನ್ನು ಮಣಿಸಿದರು. ಮೊದಲ ಗೇಮ್‌ನಲ್ಲಿ ಸುಲಭವಾಗಿ ಗೆದ್ದ ಅವರು ಎರಡನೇ ಗೇಮ್‌ನಲ್ಲಿ ಅಲ್ಪ ಪೈಪೋಟಿ ಎದುರಿಸಿದರು.

ಮಹಿಳಾ ವಿಭಾಗದ ಡಬಲ್ಸ್‌ ಪಂದ್ಯದಲ್ಲಿ ಪ್ರಜಕ್ತಾ ಸಾವಂತ್‌ ಮತ್ತು ಕರ್ನಾಟಕದ ಅಶ್ವಿನಿ ಪೊನ್ನಪ್ಪ 22–20, 20–22, 10–21ರಲ್ಲಿ ವಿಂಗ್ ಯಂಗ್‌ ಹಾಗೂ ಯೆಂಗ್‌ ಗಾ ಟಿಂಗ್ ಎದುರು ಮಣಿದರು. ಈ ಪಂದ್ಯ ಮುಗಿದಾಗ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸಮಬಲ ಸಾಧಿಸಿದರು.

ಎರಡನೇ ಸಿಂಗಲ್ಸ್‌ ಪಂದ್ಯದಲ್ಲಿ ಭಾರತದ ಶ್ರೀಕೃಷ್ಣಪ್ರಿಯ ಕುದರವಳ್ಳಿ 19–21, 21–18, 20–22ರಲ್ಲಿ ಚೇಂಗ್‌ ಯಿಂಗ್‌ ಮೇಯಿ ಎದುರು ಪರಾಭವಗೊಂಡ ಕಾರಣ ಭಾರತಕ್ಕೆ 1–2ರಲ್ಲಿ ಹಿನ್ನಡೆಯಾಯಿತು. ಡಬಲ್ಸ್‌ ವಿಭಾಗದಲ್ಲಿ ಜಯಿಸಿದ ಸಿಂಧು ಮತ್ತು ಸಿಕ್ಕಿರೆಡ್ಡಿ ಇದನ್ನು ಸರಿದೂಗಿಸಿದರು. ಈ ಜೋಡಿ 21–15, 15–21, 21–14ರಲ್ಲಿ ಜಿ ಜು ಯಾವೊ ಹಾಗೂ ಯೊಯನ್‌ ಸಿನ್‌ ಯಿಂಗ್‌ ಎದುರು ಜಯ ಸಾಧಿಸಿತು.

ಇದರಿಂದ ಉಭಯ ತಂಡಗಳು 2–2ರಲ್ಲಿ ಸಮಬಲ ಸಾಧಿಸಿದವು. ಆದ್ದರಿಂದ ನಿರ್ಣಾಯಕ ಮೂರನೇ ಸಿಂಗಲ್ಸ್‌ ಪಂದ್ಯದ ಮಹತ್ವ ಹೆಚ್ಚಿತ್ತು. ಈ ಪಂದ್ಯದಲ್ಲಿ ರುತ್ವಿಕಾ ಶಿವಾನಿ 16–21, 21–16, 21–13ರಲ್ಲಿ ಯೆಂಗ್‌ ಸಮ್ ಯೀ ಅವರನ್ನು ಸೋಲಿಸಿ ಭಾರತದ ಗೆಲುವಿಗೆ ಕಾರಣ ರಾದರು. ಇದೇ ವರ್ಷದ ಮೇ ನಲ್ಲಿ ನಡೆಯಲಿರುವ ಊಬರ್ ಕಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಏಷ್ಯಾ ತಂಡ ಚಾಂಪಿಯನ್‌ಷಿಪ್‌ ವೇದಿಕೆ ಎನಿಸಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT