ಬುಧವಾರ, ಡಿಸೆಂಬರ್ 11, 2019
17 °C
ಸೇಡು ತೀರಿಸುವ ಭರವಸೆಯಲ್ಲಿ ಆತಿಥೇಯರು

ಇಂಡಿಯನ್ ಸೂಪರ್ ಲೀಗ್: ನಾರ್ತ್‌ ಈಸ್ಟ್‌ಗೆ ಪುಣೆ ಸವಾಲು

Published:
Updated:
ಇಂಡಿಯನ್ ಸೂಪರ್ ಲೀಗ್: ನಾರ್ತ್‌ ಈಸ್ಟ್‌ಗೆ  ಪುಣೆ ಸವಾಲು

ಗುವಾಹಟಿ: ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೋತು ಆಘಾತ ಕಂಡಿರುವ ಎಫ್‌ಸಿ ಪುಣೆ ಸಿಟಿ ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಗೆಲುವಿನ ಹುಮ್ಮಸ್ಸಿನಲ್ಲಿದೆ.

ಇಂಡಿಯನ್‌ ಸೂಪರ್ ಲೀಗ್‌ನ ಬುಧವಾರದ ಪಂದ್ಯದಲ್ಲಿ ಈ ತಂಡ ಪುಣೆ ಎಫ್‌ಸಿ ವಿರುದ್ಧ ಸೆಣಸಲಿದೆ. ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಪುಣೆ ತಂಡಕ್ಕೆ ಇಲ್ಲಿ ಜಯ ಅನಿವಾರ್ಯ.

ಲೀಗ್‌ನಲ್ಲಿ ಮೊದಲ ಬಾರಿ ಎದುರಾದಾಗ ಪುಣೆ ಎಫ್‌ಸಿ ತಂಡ ನಾರ್ತ್ ಈಸ್ಟ್ ವಿರುದ್ಧ 5-0 ಅಂತರದ ಜಯ ಗಳಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಈಗ ತವ ರಿನ ಪಂದ್ಯದಲ್ಲಿ ನಾರ್ತ್ ಈಸ್ಟ್ ಶ್ರಮಿ ಸಲಿದೆ. ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡ ಎಂಬ ‘ದಾಖಲೆ’ ಹೊಂದಿರುವ ಪುಣೆಯನ್ನು ಮಣಿಸುವುದು ಕಷ್ಟಸಾಧ್ಯವಲ್ಲ ಎಂಬ ಸ್ಥೈರ್ಯ ಆತಿಥೇಯರ ಭರವಸೆ ಹೆಚ್ಚಿಸಿದೆ.

ಪ್ರತಿಕ್ರಿಯಿಸಿ (+)