ಬುಧವಾರ, ಡಿಸೆಂಬರ್ 11, 2019
26 °C

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿದ ರಾಮನಾಥ ಕೋವಿಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿದ ರಾಮನಾಥ ಕೋವಿಂದ್

ಶ್ರವಣಬೆಳಗೊಳ: 12 ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಪಂಚಕಲ್ಯಾಣ ನಗರದಲ್ಲಿ ನಿರ್ಮಿಸಿರುವ ಚಾವುಂಡರಾಯ ಸಭಾಮಂಟಪದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಧ್ಯುಕ್ತ ಚಾಲನೆ ನೀಡಿದರು.

ಇದೇ ವೇಳೆ ರಾಮನಾಥ ಕೋವಿಂದ್ ಅವರು ಬಾಹುಬಲಿ ಪುತ್ಥಳಿ ಅನಾವರಣ ಮಾಡಿದರು. ವರ್ಧಮಾನ ಸಾಗರ ಮಹಾರಾಜರು ರಾಮನಾಥ ಕೋವಿಂದ್ ದಂಪತಿಗೆ ಆಶೀರ್ವದಿಸಿದರು.

ಈ ಮಹೋತ್ಸವವು ಶ್ರೀಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದು,  ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಎಚ್. ಡಿ. ದೇವೇಗೌಡ ಭಾಗಿಯಾಗಿದ್ದಾರೆ. 

 ಬಾಹುಬಲಿ ಖ್ಯಾತಿ ಸಾರುವ ಹಾಡಿನ ಮೂಲಕ ಆರಂಭವಾದ ಈ ಐತಿಹಾಸಿಕ ಕ್ಷಣಕ್ಕೆ ದೇಶದ ವಿವಿಧ ಭಾಗಗಳಿಂದ ಮುನಿಗಳು, ತ್ಯಾಗಿಗಳು, ಮಾತಾಜಿಗಳು ಮತ್ತು ಅಪಾರ ಸಂಖ್ಯೆಯ ಭಕ್ತರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಮಹೋತ್ಸವದ ದೃಶ್ಯಗಳು ಎಲ್ಇಡಿ ಪರದೆಯಲ್ಲಿ ಪ್ರಸಾರವಾಗುತ್ತಿವೆ.

ಪ್ರತಿಕ್ರಿಯಿಸಿ (+)