ಮುಸ್ಲಿಮರನ್ನು ‍ಪಾಕಿಸ್ತಾನಿ ಎನ್ನುವವರನ್ನು ಶಿಕ್ಷಿಸಿ–ಒವೈಸಿ, ಮುಸ್ಲಿಮರನ್ನು ಭಾರತದಲ್ಲಿ ನೆಲೆಸಲು ಬಿಡಬಾರದು–ವಿನಯ್ ಕಟಿಯಾರ್

7

ಮುಸ್ಲಿಮರನ್ನು ‍ಪಾಕಿಸ್ತಾನಿ ಎನ್ನುವವರನ್ನು ಶಿಕ್ಷಿಸಿ–ಒವೈಸಿ, ಮುಸ್ಲಿಮರನ್ನು ಭಾರತದಲ್ಲಿ ನೆಲೆಸಲು ಬಿಡಬಾರದು–ವಿನಯ್ ಕಟಿಯಾರ್

Published:
Updated:
ಮುಸ್ಲಿಮರನ್ನು ‍ಪಾಕಿಸ್ತಾನಿ ಎನ್ನುವವರನ್ನು ಶಿಕ್ಷಿಸಿ–ಒವೈಸಿ, ಮುಸ್ಲಿಮರನ್ನು ಭಾರತದಲ್ಲಿ ನೆಲೆಸಲು ಬಿಡಬಾರದು–ವಿನಯ್ ಕಟಿಯಾರ್

ಹೈದರಾಬಾದ್ : ಭಾರತದಲ್ಲಿನ ಮುಸ್ಲಿಮರನ್ನು ಪಾಕಿಸ್ತಾನಿಯರು ಎನ್ನುವವರನ್ನು ಶಿಕ್ಷಿಸಿ ಎಂದು ಆಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ಇಂದಿನ ಸಂಸತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಒವೈಸಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಮುಸ್ಲಿಮರನ್ನು ಪಾಕಿಸ್ತಾನಿಗಳು ಎಂದು ಹೇಳುವವರ ವಿರುದ್ಧ ಕಾಯ್ದೆಯನ್ನು ಜಾರಿಗೊಳಿಸಬೇಕು. ಅವರನ್ನು ಸೆರೆವಾಸಕ್ಕೆ ದೂಡಬೇಕು. ಮೂರು ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಆದರೆ ಬಿಜೆಪಿ ಸರ್ಕಾರ ಇಂತಹ ಕಾನೂನನ್ನು ಜಾರಿಗೆ ತರುವುದಿಲ್ಲ ಎಂದು ಕಿಡಿಕಾರಿದರು. 

ಮುಸ್ಲಿಮರನ್ನು ಭಾರತದಲ್ಲಿ ನೆಲೆಸಲು ಬಿಡಬಾರದು –ವಿನಯ್ ಕಟಿಯಾರ್ 

ಒವೈಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ವಿನಯ್ ಕಟಿಯಾರ್ ಅವರು, ಮುಸ್ಲಿಮರನ್ನು ಭಾರತದಲ್ಲಿ ನೆಲೆಸಲು ಬಿಡಬಾರದು ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.

ಮುಸ್ಲಿಮರು ತಮ್ಮ ಜನಸಂಖ್ಯೆಯ ಆಧಾರದ ಮೇಲೆ ಭಾರತವನ್ನು ವಿಭಜಿಸಿದ್ದಾರೆ. ಅಂತಹವರು ಭಾರತದಲ್ಲಿ ವಾಸಿಸುವ ಅಗತ್ಯತೆ ಇಲ್ಲ ಎಂದು ಕಟಿಯಾರ್ ಹೇಳಿದ್ದಾರೆ.

ಈಗಾಗಲೇ ಅವರ ವಾಸಕ್ಕಾಗಿ ಪ್ರತ್ಯೇಕ ಪ್ರಾಂತ್ಯ ನೀಡಲಾಗಿದೆ. ಅವರು ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ಹೋಗಲಿ, ಭಾರತದಲ್ಲೇ ಯಾಕೆ ಇರಬೇಕು? ಎಂದು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry