ಪ್ರತಿಕ್ರಿಯೆಗಳು -‘ಸಿದ್ದರಾಮಯ್ಯ, ಬಿಎಸ್‌ವೈ ಆದ್ಯತೆ ಸೂಕ್ತ’

7

ಪ್ರತಿಕ್ರಿಯೆಗಳು -‘ಸಿದ್ದರಾಮಯ್ಯ, ಬಿಎಸ್‌ವೈ ಆದ್ಯತೆ ಸೂಕ್ತ’

Published:
Updated:

ಸಿದ್ದರಾಮಯ್ಯ, ಬಿಎಸ್‌ವೈ ಆದ್ಯತೆ ಸೂಕ್ತ’

ರಾಜಕೀಯ ನಾಯಕರು ಚುನಾವಣೆಯನ್ನು ಮುಂದಿಟ್ಟು ಕೊಂಡು ಭರವಸೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರ ಆದ್ಯತೆಗಳು ಸರಿಯಾಗಿಯೇ ಇವೆ. ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಸರ್ವರಿಗೂ ಆರೋಗ್ಯ ಭಾಗ್ಯ ಅಗತ್ಯವಿದೆ. ಕೃಷಿ ಹಾಗೂ ಕೃಷಿಕರನ್ನು ಉಳಿಸಿಕೊಳ್ಳಲು ನೀರಾವರಿ ಯೋಜನೆಗಳೂ ಬೇಕಿದೆ.

ಈವರೆಗೆ ಜಮೀನ್ದಾರರೇ ಸಾಲಮನ್ನಾದ ಲಾಭ ಪಡೆದಿದ್ದಾರೆ. ಸಾಲ ಮನ್ನಾದಿಂದ ರೈತರಲ್ಲಿ ಸಾಲ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಸರ್ಕಾರ ಬಡ ರೈತರಿಗೆ ಹೆಚ್ಚಿನ ಸವಲತ್ತುಗಳನ್ನು ಕೊಡಲಿ, ಮತ್ತೆ ಸಾಲ ಮನ್ನಾ ಮಾಡುವುದು ಬೇಡ.

ಶಿವಪುತ್ರ ಪಟಪಳ್ಳಿ,ವ್ಯಾಪಾರಿ, ಬೀದರ್‌

‘ಅಭಿನಂದನೀಯ ಕೆಲಸ’

ಮೂರೂ ಜನ→ ನಾಯಕರು ಮೂಲಭೂತ ವಿಷಯವನ್ನೇ ತಮ್ಮ ಮುಖ್ಯ ಆದ್ಯತೆಯಾಗಿ ಜನರ ಮುಂದಿಟ್ಟಿದ್ದಾರೆ. ಆದ್ದರಿಂದ ಇದರಲ್ಲಿ ಇಂಥದ್ದೇ ಸರಿ ಅಥವಾ ತಪ್ಪು, ಇದೇ ಹೆಚ್ಚು ಅಥವಾ ಇನ್ನೊಂದು ಕಡಿಮೆ ಎಂದು ಹೇಳುವುದು ಕಷ್ಟ. ಇವೇ ಜನಸಾಮಾನ್ಯರ ಅಗತ್ಯಗಳೂ ಹೌದು. ಅದನ್ನೇ ನಾಯಕರು ಪ್ರಧಾನವಾಗಿ ಆರಿಸಿದ್ದಾರೆ. ಆದ್ದರಿಂದ ಜನರು ಸೂಕ್ಷ್ಮವಾಗಿ ಇಂಥ ವಿಚಾರಗಳನ್ನು ಗಮನಿಸಿ ತಮಗೆ ಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು.

ಮೂವರೂ ನಾಯಕರನ್ನು ಮಾಧ್ಯಮವೊಂದು ಒಂದೇ ವೇದಿಕೆಯಲ್ಲಿ ತಂದು ನಿಲ್ಲಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನೀಯ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭ ಜನರು ಮತ್ತು ರಾಜಕಾರಣಿಗಳನ್ನು ಬೆಸೆಯುವ ಕಾರ್ಯವನ್ನು ಅಲ್ಲಿನ ಮಾಧ್ಯಮಗಳು ಮಾಡುತ್ತಿವೆ. ಆ ಸಂದರ್ಭ ಇಲ್ಲಿ ನೆನಪಾಯಿತು. ಆರೋಗ್ಯಕರ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಇದು ನಾಂದಿ.

ಡಾ.ಪ್ರಭುರಾಜ ನಾಯಕ, ರಾಜ್ಯಶಾಸ್ತ್ರ ಉಪನ್ಯಾಸಕ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕೊಪ್ಪಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry