ಶುಕ್ರವಾರ, ಡಿಸೆಂಬರ್ 6, 2019
24 °C

ಗಂಡು ಮಗುವಿಗೆ ಜನ್ಮ ನೀಡದ್ದಕ್ಕೆ ಅತ್ತೆಯಿಂದ ಕಿರುಕುಳ: ಮಕ್ಕಳೊಂದಿಗೆ ಪೋಷಕರು ಕರೆಗೆ ಬಿದ್ದು ಆತ್ಮಹತ್ಯೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಗಂಡು ಮಗುವಿಗೆ ಜನ್ಮ ನೀಡದ್ದಕ್ಕೆ ಅತ್ತೆಯಿಂದ ಕಿರುಕುಳ: ಮಕ್ಕಳೊಂದಿಗೆ ಪೋಷಕರು ಕರೆಗೆ ಬಿದ್ದು ಆತ್ಮಹತ್ಯೆ

ಹೈದರಾಬಾದ್‌: ನಗರದ ಕೀಸಾರಾ ಪ್ರದೇಶದಲ್ಲಿ ಇಬ್ಬರು ಮಕ್ಕಳೊಂದಿಗೆ ಪೋಷಕರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕೌಟುಂಬಿಕ ಕಲಹದಿಂದ ಬೆಸತ್ತು ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತರನ್ನು ವ್ಯಾಪಾರಿ ಎಂ. ರಮೇಶ್‌(30), ಶ್ಯಾಮಲಾ ಅಲಿಯಾಸ್‌ ಮಾನಸ(26), ಗೀತಾಶ್ರೀ(3), ದೀವಿಜಾ(6 ತಿಂಗಳು) ಎಂದು ಗುರುತಿಸಲಾಗಿದೆ.

ಶವಗಳಿಗಾಗಿ ಕರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಎರಡು ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಸಬ್ಇನ್ಸ್‌ಪೆಕ್ಟರ್‌ ಎಂ ಸುರೇಂದರ್ ಗೌಡ್ ತಿಳಿಸಿದ್ದಾರೆ.

‘ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಆರೋಪಿಸಿ ನನ್ನ ಮಗಳಿಗೆ ಆಕೆಯ ಆತ್ತೆ ಹಾಗೂ ಕುಟುಂಬ ಸದಸ್ಯರು ಕಿರುಕುಳ ನೀಡುತ್ತಿದ್ದರು ಎಂದು ಮಾನಸ ಅವರ ತಂದೆ ದೂರು ನೀಡಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸುವಂತೆ’ ಆಗ್ರಹಿಸಿದ್ದಾರೆ.

2014ರ ಮಾರ್ಚ್‌ನಲ್ಲಿ ರಮೇಶ್‌ ಹಾಗೂ ಮಾನಸ ಮದುವೆಯಾಗಿದ್ದರು.

ಪ್ರತಿಕ್ರಿಯಿಸಿ (+)