ಶುಕ್ರವಾರ, ಡಿಸೆಂಬರ್ 6, 2019
25 °C

ಪ್ರಧಾನಿ ಎಂಬುದನ್ನೇ ಮರೆತ ಮೋದಿ: ರಾಹುಲ್ ಗಾಂಧಿ ತಿರುಗೇಟು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪ್ರಧಾನಿ ಎಂಬುದನ್ನೇ ಮರೆತ ಮೋದಿ: ರಾಹುಲ್ ಗಾಂಧಿ ತಿರುಗೇಟು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಸಂಸತ್‌ನಲ್ಲಿ ನಡೆಸಿದ ವಾಗ್ದಾಳಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಮೋದಿ ಅವರು ತಾವು ಪ್ರಧಾನಿ ಎಂಬುದನ್ನೇ ಮರೆತಿದ್ದಾರೆ. ಅವರು ಪ್ರಶ್ನೆಗಳಿಗೆ ಉತ್ತರ ನೀಡಬೇಕೇ ವಿನಹ ಯಾವಾಗಲೂ ಪ್ರತಿಪಕ್ಷದ ವಿರುದ್ಧ ಆರೋಪ ಮಾಡುವುದಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಮೋದಿ ಒಂದು ಗಂಟೆಗೂ ಹೆಚ್ಚು ಅವಧಿ ಮಾತನಾಡಿದರು. ಆದರೆ, ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ಬಗ್ಗೆ ಮಾತನಾಡಲೇ ಇಲ್ಲ. ರೈತರ ಬಗ್ಗೆ ಮತ್ತು ಯುವಕರಿಗೆ ಉದ್ಯೋಗ ನೀಡುವ ವಿಷಯಗಳ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ. ಮೋದಿಯವರದ್ದು ಕೇವಲ ರಾಜಕೀಯ ಭಾಷಣ’ ಎಂದು ರಾಹುಲ್ ಟೀಕಿಸಿದರು.

ಪ್ರತಿಕ್ರಿಯಿಸಿ (+)