ಬುಧವಾರ, ಡಿಸೆಂಬರ್ 11, 2019
26 °C

ನೀರು, ಆಹಾರ ಕೊರತೆ–ಹೆಣ್ಣಾನೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರು, ಆಹಾರ ಕೊರತೆ–ಹೆಣ್ಣಾನೆ ಸಾವು

ನರಸಿಂಹರಾಜಪುರ: ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಸಗಲ್ಲು ಮೀಸಲು ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 6 ವರ್ಷದ ಹೆಣ್ಣು ಆನೆಯ ಶವ ಪತ್ತೆಯಾಗಿದೆ. ನೀರು ಆಹಾರ ಸಿಗದೆ ತೀವ್ರ ಬಳಲಿಕೆಯಿಂದ ಸಾವನ್ನಪ್ಪಿದೆ. ಆನೆ ಸತ್ತು ಎಂಟು ದಿನ ಸಂದಿದೆ ಎಂದು ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಬಿ.ಸಿ.ಲೋಕೇಶ್ ತಿಳಿಸಿದ್ದಾರೆ.

ಸ್ಥಳಕ್ಕೆ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ತಾಖತ್ ಸಿಂಗ್ ರಾಣಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭದ್ರಾವತಿ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯಾಧಿಕಾರಿ ಡಾ.ನಾಗೇಶ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಆನೆಯನ್ನು ಸುಡಲಾಯಿತು.

ಪ್ರತಿಕ್ರಿಯಿಸಿ (+)