‘ಮ್ಕಕಳ ಪ್ರತಿಭೆಗೆ ವೇದಿಕೆ ಅಗತ್ಯ’

7

‘ಮ್ಕಕಳ ಪ್ರತಿಭೆಗೆ ವೇದಿಕೆ ಅಗತ್ಯ’

Published:
Updated:

ನರೇಗಲ್: ವಿಜ್ಞಾನ ವಸ್ತುಪ್ರದರ್ಶನ ಶೈಕ್ಷಣಿಕ ಬೆಳವಣಿಗೆಯ ಜತೆ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಹಾಲಕೆರೆಯ ಅನ್ನದಾನ ಸ್ವಾಮೀಜಿ ಹೇಳಿದರು. ಪಟ್ಟಣದ ಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣಕ್ಕಿಂತ ಶ್ರೇಷ್ಠ ಸಂಪತ್ತು ಬೇರೊಂದಿಲ್ಲ. ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಯುವಕರು ಕರ್ತೃತ್ವಶಾಲಿಗಳಾಗಲು ಸಾಧ್ಯ ಆದ್ದರಿಂದ ವಿದ್ಯಾರ್ಥಿಗಳು ನಿರಂತರ ವಿದ್ಯೆ, ಶ್ರಮದಿಂದ ಗುರಿ ಸಾಧಿಸಬೇಕು ಎಂದು ಹೇಳಿದರು.

ವೈದ್ಯ ಡಾ.ಜಿ.ಕೆ.ಕಾಳೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುಣ ನಡತೆ ಬೆಳೆಸಿಕೊಂಡು ಸಮಾಜಕ್ಕೆ ಸಂಪನ್ಮೂಲವಾಗಬೇಕು. ಪೋಷಕರು, ಶಿಕ್ಷಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳ ಮನಸ್ಸು ಸುಂದರವಾಗಿ ಅರಳುವ ಮೃದು ಸ್ವಭಾವದ ಹೂವಿನಂತೆ, ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮನಸನ್ನು ಅರಿತು ಸಮಾಜಕ್ಕೆ ಮಾದರಿಯಾಗುವ ವಿದ್ಯಾರ್ಥಿಗಳನ್ನು ನೀಡಬೇಕು ಎಂದು ಹೇಳಿದರು.

ಭಾರತದ ಸಾಹಿತ್ಯ, ಇತಿಹಾಸ, ಹತ್ತಾರು ವಿಜ್ಞಾನದ ಆವಿಷ್ಕಾರಗಳು, ಪ್ರದರ್ಶನಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿದವು. ವಿದ್ಯಾರ್ಥಿಗಳು ವೀಕ್ಷಕರ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸಿದರು. ನಂತರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಶೋಕ ಉಂಡಿಯವರಿಂದ ಪವಾಡ ಬಯಲು ಕಾರ್ಯಕ್ರಮ ಜರುಗಿತು. ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಪುರಾಣಿಕಮಠ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಸೋಮನಕಟ್ಟಿ, ಸಂಗಪ್ಪ ಮೆಣಸಗಿ, ಸಿ.ಕೆ.ಹಿರೇಮಠ, ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry