7

ಪ್ರವಾಸಿಗರಿಗೆ ಸ್ವಯಂಸೇವಕರು ಮಾಹಿತಿ ನೀಡಿ

Published:
Updated:
ಪ್ರವಾಸಿಗರಿಗೆ ಸ್ವಯಂಸೇವಕರು ಮಾಹಿತಿ ನೀಡಿ

ಮಹಾಮಸ್ತಕಾಭಿಷೇಕ ಸಹಾಯಕ್ಕೆ ಸ್ವಯಂ ಸೇವಕರು

11 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಲಕ್ಷಾಂತರ ಭಕ್ತರು ನಿತ್ಯ ಆಗಮಿಸುತ್ತಾರೆ. ಅವರಿಗೆ ಸಹಾಯ ಮಾಡಲು, ಎಲ್ಲಿಗೆ ಹೋಗಬೇಕು ಅಲ್ಲಿಗೆ ಸರಿಯಾದ ಮಾರ್ಗದರ್ಶನ ಮಾಡಲು ಸ್ಕೌಟ್ಸ್‌, ಗೈಡ್ಸ್‌ ಸ್ವಯಂ ಸೇವಕರು ಸಜ್ಜಾಗಿದ್ದಾರೆ.

ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರಿಗೆ ಸ್ಕೌಟ್ಸ್‌, ಗೈಡ್ಸ್‌ ಸ್ವಯಂ ಸೇವಕರು ಸೂಕ್ತ ಮಾಹಿತಿ ನೀಡಬೇಕು ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಭಾರತ್‌ ಸ್ಕೌಟ್ಸ್, ಗೈಡ್ಸ್‌ ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಭಗವಾನ್‌ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಮಂಗಳವಾರ ಶ್ರವಣಬೆಳಗೊಳದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಸೇವಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶಿಸ್ತು, ಸಂಯಮ, ತಾಳ್ಮೆ ಸ್ವಯಂ ಸೇವಕರಿಗಿದೆ. ಸೇವಾ ಮನೋಭಾವದಿಂದ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದರು.

ಭಾರತ್‌ ಸ್ಕೌಟ್ಸ್, ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ‘ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸ್ವಯಂಸೇವಕರಿಗೆ ಸೇವೆ ಮಾಡುವ ಅವಕಾಶ ಕಲ್ಪಿಸಲಾಗಿದೆ. 3500ಕ್ಕೂ ಸದಸ್ಯರು ಭಾಗವಹಿಸಲಿದ್ದಾರೆ. ಇದರಲ್ಲಿ 7 ಬ್ಯಾಚ್‌ಗಳನ್ನು ಮಾಡಲಾಗುವುದು. 1981ರಲ್ಲಿ ನಡೆದ ಮಹಾಮಸ್ತಕಾಭಿಷೇದಿಂದ ಈವರೆಗೆ ನಡೆದಿರುವ ಮಸ್ತಕಾಭಿಷೇಕದವರೆಗೆ ಸ್ಕೌಟ್ಸ್‌, ಗೈಡ್ಸ್‌ ಸ್ವಯಂಸೇವಕರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದರು.

ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಕೇರಳ, ಪಶ್ಚಿಮಬಂಗಾಳ, ತಮಿಳುನಾಡು ರಾಜ್ಯದಿಂದಲೂ ಸ್ವಯಂ ಸೇವಕರು ಆಗಮಿಸಲಿದ್ದಾರೆ. ಯಾವುದೇ ಲೋಪ ಬರದಂತೆ ಸ್ವಯಂಸೇವಕರು ಕೆಲಸ ನಿರ್ವಹಿಸಬೇಕಿದೆ ಎಂದು ಹೇಳಿದರು.

ಶಾಸಕ ಸಿ.ಎನ್‌. ಬಾಲಕೃಷ್ಣ ಮಾತನಾಡಿ, ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದೇಶ, ವಿದೇಶಗಳಿಂದ 40ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಕೆ. ಪುಷ್ಪಲತಾ ಮಾತನಾಡಿದರು.

ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷಾಧಿಕಾರಿ ಬಿ.ಎನ್‌. ವರಪ್ರಸಾದರೆಡ್ಡಿ, ಐಎಎಸ್‌ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಸ್ಕೌಟ್ಸ್‌, ಗೈಡ್ಸ್‌ ಪದಾಧಿಕಾರಿಗಳಾದ ಡಾ.ವೈ.ಎಸ್‌. ವೀರಭದ್ರಪ್ಪ, ಪ್ರಕಾಶ್‌ ಯಾಜಿ, ವರಪ್ರಸಾದ್‌. ಪಿ. ವಿಶ್ವನಾಥ್‌, ಡಾ.ಗುರುಮೂರ್ತಿ, ಎಂ.ಬಿ. ಗಿರಿಜಾಂಬಿಕಾ, ಎಚ್‌.ಎಂ.ಗೌಡಯ್ಯ, ಸುರೇಶ್‌ ಗುರೂಜಿ, ಭಾರತಿ ನಾಗೇಶ್‌ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry