ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ನೈರ್ಮಲ್ಯ, ರಸ್ತೆಗೆ ಹೆಚ್ಚಿನ ಆದ್ಯತೆ

Last Updated 7 ಫೆಬ್ರುವರಿ 2018, 10:31 IST
ಅಕ್ಷರ ಗಾತ್ರ

ಶಿಗ್ಗಾವಿ: ಪುರಸಭೆ ವ್ಯಾಪ್ತಿಯಲ್ಲಿ ಬೇಸಿಗೆ ಬವಣೆ ತಡೆಯಲು ಕುಡಿಯುವ ನೀರಿನ ಸೌಕರ್ಯ, ಪಟ್ಟಣದ ಸ್ವಚ್ಛತೆ, ಬೀದಿ ದೀಪ, ರಸ್ತೆ, ಚರಂಡಿಗಳ ನಿರ್ಮಾಣದ ಕಾಮಗಾರಿಗಳಿಗೆ ಪ್ರಥಮ ಆದ್ಯತೆ ನೀಡುವ ಮೂಲಕ ವಿವಿಧ ಕಾಮಗಾರಿ ಯೋಜನೆಗಳಿಗಾಗಿ ₹12.91 ಕೋಟಿ ಮೊತ್ತದ ಬಜೆಟ್‌ ಮಂಡಿಸಲಾಯಿತು.

ಪಟ್ಟಣದ ಪುರಸಭೆ ಆಡಳಿತ ಭವನದಲ್ಲಿ ಮಂಗಳವಾರ ನಡೆದ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ನೇತೃತ್ವದಲ್ಲಿ 2018–19ನೇ ಸಾಲಿನ ಬಜೆಟ್ ಅನ್ನು ಮಂಡಿಸಲಾಯಿತು. ಅದರಲ್ಲಿ ಎಲ್ಲ ಯೋಜನೆಗಳನ್ನು ಅನುಷ್ಠಾನದ ನಂತರದ ಸಿದ್ಧತೆಗಳ ನಂತರವು ₹11.50 ಲಕ್ಷ ಉಳಿತಾಯದ ಅಂದಾಜು ಮಾಡಲಾಯಿತು.

ಹಣಕಾಸು ಯೋಜನೆಯಡಿ ₹5ಲಕ್ಷ, ಸರ್ಕಾರದ ಮುಕ್ತ ನಿಧಿ ಅನುದಾನ ₹ 3ಕೋಟಿ, ಪೃಕೃತಿ ವಿಕೋಪ ಪರಿಹಾರ ನಿಧಿ ₹30ಲಕ್ಷ, ಕಟ್ಟಡ ಅನುಮತಿ ಶುಲ್ಕ ₹5ಲಕ್ಷ, ಅಭಿವೃದ್ಧಿ ಶುಲ್ಕ ₹6ಲಕ್ಷ, ವಾಣಿಜ್ಯ ಸಂಕೀರ್ಣ ಬಾಡಿಗೆ ₹20ಲಕ್ಷ, ಆಡಳಿತ ಮಂಡಳಿ ಗೌರವಧನ ₹8ಲಕ್ಷ, ಪ್ರಯಾಣ ವೆಚ್ಚಕ್ಕಾಗಿ ₹2ಲಕ್ಷ, ವಾಹನ ದುರಸ್ತಿ ₹8.55ಲಕ್ಷ, ವಾಹನ ಇಂಧನಕ್ಕಾಗಿ ₹10ಲಕ್ಷ, ಜಾಹೀರಾತು ಹಾಗೂ ಪ್ರಚಾರಕ್ಕಾಗಿ ₹8.50ಲಕ್ಷ, ಕಾರ್ಮಿಕರ ವೇತನ ₹84ಲಕ್ಷ, ಕಾನೂನು ವೆಚ್ಚಕ್ಕಾಗಿ ₹80 ಸಾವಿರ, ಸಮಾಲೋಚನಾ ವೆಚ್ಚಕ್ಕಾಗಿ ₹2 ಲಕ್ಷ, ಸಂಪರ್ಕ ವೆಚ್ಚಕ್ಕಾಗಿ ₹ 75ಸಾವಿರ, ರಸ್ತೆಗೆ ₹5ಲಕ್ಷ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹1.25ಕೋಟಿ, ಚರಂಡಿ ನಿರ್ಮಾಣಕ್ಕೆ ₹ 40 ಲಕ್ಷ, ನಗರೋತ್ಥಾನ ಯೋಜನೆಯಡಿ ₹5ಕೋಟಿ ಮೊತ್ತವನ್ನು ರಸ್ತೆ, ಚರಂಡಿ ಕಾಮಗಾರಿಗೆ ಅನುಷ್ಠಾನಗಳಿಸಲಾಗಿದೆ.

ಉಪಾಧ್ಯಕ್ಷ ಪರಶುರಾಮ ಸೊನ್ನದ ಮಂಡಿಸಿದ ಅಯ-ವ್ಯಯ ವನ್ನು ಬೆಂಬಲಿ ಸಭೆ ಒಮ್ಮತದ ಮಂಜುರಾತಿ ನೀಡಿತು. ನಂತರ ವಿವಿಧ ಪ್ರಗತಿ ಕುರಿತು ಚರ್ಚಿಸಲಾಯಿತು.
ಪುರಸಭೆ ಅಧ್ಯಕ್ಷ ಪ್ರಸಾದ ಸುರಗೀಮಠ, ಪರಶುರಾಮ ಸೊನ್ನದ, ಎಸ್.ಎಚ್.ನಾಯ್ಕರ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT