ಶುಕ್ರವಾರ, ಡಿಸೆಂಬರ್ 6, 2019
24 °C

ಗಣಿತಜ್ಞನ ಮೊದಲ ನೋಟ

Published:
Updated:
ಗಣಿತಜ್ಞನ ಮೊದಲ ನೋಟ

 

‘ಸೂಪರ್‌ 30’ ಚಿತ್ರದಲ್ಲಿ ಹೃತಿಕ್ ವಿಭಿನ್ನ ಪಾತ್ರದಲ್ಲಿ ಹೃತಿಕ್‌ ಕಾಣಿಸಿಕೊಳ್ಳಲಿದ್ದಾರೆ. ಬಿಹಾರದ ಗಣಿತಜ್ಞ ಆನಂದ್‌ ಕುಮಾರ್‌ ಅವರ ಪಾತ್ರದಲ್ಲಿ ಮಿಂಚಿರುವ ಹೃತಿಕ್ ಅವರ ಫಸ್ಟ್‌ಲುಕ್ ಈಚೆಗಷ್ಟೇ ಬಿಡುಗಡೆಯಾಗಿದೆ. ಹೃತಿಕ್‌ ಅವತಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಫ್ಯಾಂಟಮ್ ಫಿಲ್ಮ್ಸ್‌ ಟ್ವಿಟರ್‌ಗೆ ಈ ಚಿತ್ರದ ಫಸ್ಟ್‌ಲುಕ್ ಶೇರ್ ಮಾಡಿದೆ. ‘ದ ಫಸ್ಟ್‌ ಪೇಜ್‌ ಇನ್‌ ಬನಾರಸ್‌’ ಎಂದು ಬರೆದುಕೊಂಡಿದೆ. ಚಿತ್ರದಲ್ಲಿ ಹೃತಿಕ್‌ ಗಡ್ಡಧಾರಿಯಾಗಿ ಮುಖ ಬಗ್ಗಿಸಿಕೊಂಡು ಕಿರುನಗೆ ಬೀರಿದ್ದಾರೆ. ಬೆಳಕಿನ ಸಂಯೋಜನೆ ಚಿತ್ರದಲ್ಲಿ ಗಮನ ಸೆಳೆಯುವ ವಿಷಯ. ಗಣಿತಜ್ಞ ಆನಂದ್‌ ಕುಮಾರ್‌ ಸುಂದರವಾಗಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಕಾಸ್‌ ಬಾಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಆನಂದ್‌ ಕುಮಾರ್‌ ಅವರ ಸಾಧನೆಯ ಹಾದಿಯನ್ನು ವಿವರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ 30 ವಿದ್ಯಾರ್ಥಿಗಳನ್ನು ಪ್ರತಿವರ್ಷ ಪ್ರತಿಷ್ಠಿತ ಐಐಟಿ ಪರೀಕ್ಷೆಗೆ ಸಜ್ಜುಗೊಳಿಸಿ ಯಶಸ್ಸು ಪಡೆದ ಆನಂದ್‌ ಅವರ ನಡೆಯನ್ನು ಚಿತ್ರ ಕಟ್ಟಿಕೊಡಲಿದೆ.

ಎರಡು ವಾರಗಳ ಹಿಂದೆಯಷ್ಟೇ ಸರಸ್ವತಿ ಪೂಜೆಯ ದಿನದಂದೇ ಹೃತಿಕ್‌ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ‘ಇದೇ ಮೊದಲ ಬಾರಿಗೆ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ವಿದ್ಯಾಧಿದೇವತೆ ನನ್ನ ಈ ಪ್ರಯತ್ನಕ್ಕೆ ಜಯ ತರಲಿ’ ಎಂದೂ ಹೃತಿಕ್‌ ಬರೆದುಕೊಂಡಿದ್ದರು.

ಪ್ರತಿಕ್ರಿಯಿಸಿ (+)