ಬುಧವಾರ, ಡಿಸೆಂಬರ್ 11, 2019
24 °C

ಮುಂದುವರಿದ ಟ್ವೀಟ್‌ ಸಮರ: 'ಅನ್ನಭಾಗ್ಯ' ಯೋಜನೆ ಕುರಿತು ಚರ್ಚೆಗೆ ಯಡಿಯೂರಪ್ಪ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂದುವರಿದ ಟ್ವೀಟ್‌ ಸಮರ: 'ಅನ್ನಭಾಗ್ಯ' ಯೋಜನೆ ಕುರಿತು ಚರ್ಚೆಗೆ ಯಡಿಯೂರಪ್ಪ ಸವಾಲು

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಟ್ಯಾಗ್‌ ಮಾಡಿ, ಉತ್ತರಿಸುವ ಧೈರ್ಯ ತೋರಿ ಎಂದು ಮತ್ತಷ್ಟು ಪ್ರಶ್ನೆಗಳನ್ನು ಪ್ರಕಟಿಸಿದ್ದಾರೆ. ಉಭಯ ನಾಯಕರ ನಡುವಣ ಟ್ವೀಟ್ ಸಮರ ಬುಧವಾರವೂ ಮುಂದುವರಿಯಿತು.

ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಮಾತನಾಡಿದ್ದ ಮೋದಿ, ‘ರಾಜ್ಯ ಸರ್ಕಾರ ಎಲ್ಲ ಯೋಜನೆಗಳಲ್ಲೂ ಶೇ 10ರಷ್ಟು ಕಮಿಷನ್‌ ಪಡೆಯುತ್ತಿದೆ’ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ಟ್ವಿಟರ್‌ ಸಮರ ಏರ್ಪಟ್ಟಿದೆ.

ಸಿದ್ದರಾಮಯ್ಯ ಅವರೇ ಸತ್ಯ ಒಪ್ಪಿಕೊಳ್ಳುವ ಧೈರ್ಯ ಮಾಡಿ ಎಂದು ಅನ್ನಭಾಗ್ಯ ಯೋಜನೆ ಕುರಿತ ಅಂಕಿ–ಅಂಶಗಳ ಪ್ರತಿ ಟ್ವೀಟಿಸಿರುವ ಯಡಿಯೂರಪ್ಪ, ‘ರಾಜ್ಯ ಸರ್ಕಾರ ಈ ಯೋಜನೆಗೆ ₹3 ಖರ್ಚು ಮಾಡಿದರೆ, ಪ್ರಧಾನಿ ಮೋದಿ ಅವರ ಸರ್ಕಾರ ₹29.64 ನೀಡುತ್ತಿದೆ. ಈ ಕುರಿತು ಚರ್ಚೆಗೆ ಸವಾಲು ಹಾಕುತ್ತಿದ್ದೇನೆ’ ಎಂದಿದ್ದಾರೆ.

ಹೀಗೆ ಮತ್ತೆ ನಾಲ್ಕು ಪ್ರಶ್ನೆಗಳನ್ನು ಪ್ರಕಟಿಸಿ ಸಿದ್ದರಾಮಯ್ಯ ಅವರನ್ನು ಉತ್ತರಿಸುವಂತೆ ಕೇಳಿದ್ದಾರೆ. ರೋಹಿಣಿ ಸಿಂಧೂರಿ, ರಶ್ಮಿ ಮಥಾಯ್‌, ಅಜಯ್‌ ನಾಗಭೂಷಣ್‌, ಡಿ.ರೂಪಾ , ಸುಭೋದ್‌ ಯಾದವ್‌ ಸೇರಿ ಅನೇಕ ಅಧಿಕಾರಿಗಳಿಗೆ ಕಿರುಕುಳ ನೀಡಿ ‘ವರ್ಗಾವಣೆ ಭಾಗ್ಯ’ ಕರುಣಿಸಲಾಗಿದೆ. ಇದು ಪ್ರಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದರ ಫಲವೇ? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

Q 9: Dear #10PercentCM @siddaramaiah, will you #Dare2Answer why officers like Rohini Sindhoori, Rashmi Mathai, Ajay Nagabushan, D Roopa, Subodh Yadav & others were harassed & blessed with #TransferBhagya for performing their duties with honesty & integrity?

1.5 ಲಕ್ಷ ಲ್ಯಾಪ್‌ಟ್ಯಾಪ್‌ ಹಂಚಿಕೆಯಲ್ಲಿ ಆಗಿರುವ ಹಗರಣವನ್ನು ಹೊರತಂದಿದ್ದಕ್ಕೆ ಅಧಿಕಾರಿ ಅಜಯ್‌ ನಾಗಭೂಷಣ್‌ ಅವರ ವರ್ಗಾವಣೆ ಮಾಡಿದಿರಿ. ಮೊರಾರ್ಜಿ ಹಾಸ್ಟೆಲ್‌ಗೆ ಸಂಬಂಧಿಸಿದ ಟೆಂಡರ್‌ ಪೂರ್ಣಗೊಳಿಸಲು ಎಚ್‌.ಆಂಜನೇಯ ಅವರ ಪತ್ನಿ ₹7 ಲಕ್ಷ ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದರು. ವಿದ್ಯಾರ್ಥಿಗಳಿಗಾಗಿ ಹಾಸಿಗೆ ದಿಂಬುಗಳ ಖರೀದಿಯಲ್ಲಿ ಆಗಿರುವ ₹14 ಕೋಟಿ ನಷ್ಟ, ಈ ಸಂಬಂಧ ತೆಗೆದುಕೊಂಡ ಕ್ರಮ ಏನು? ಎಂದಿದ್ದಾರೆ.

ಪ್ರತಿಕ್ರಿಯಿಸಿ (+)