ಭೂಪರಿವರ್ತನೆ ಮಾಡಿಸಿ

7

ಭೂಪರಿವರ್ತನೆ ಮಾಡಿಸಿ

Published:
Updated:

ಗೃಹ ನಿರ್ಮಾಣ ಸಂಘಗಳಿಗೂ ‘ರೇರಾ’ ಕಾಯ್ದೆ ಅನ್ವಯವಾಗುತ್ತದೆ ಎಂದು ಸರ್ಕಾರ ಹೇಳಿರುವುದು ವರದಿಯಾಗಿದೆ. ಸಾಲ ಮಾಡಿ ಮನೆ ಖರೀದಿಸಲು ಮುಂದಾಗುವವರು ಅನ್ಯಾಯಕ್ಕೆ ಅಥವಾ ಶೋಷಣೆಗೆ ಒಳಗಾಗುವುದನ್ನು ತಪ್ಪಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶ.

ಈ ನಿಟ್ಟಿನಲ್ಲಿ ಸರ್ಕಾರಕ್ಕೂ ಒಂದು ದೊಡ್ಡ ಜವಾಬ್ದಾರಿ ಇದೆ. ಕೆಲವು ಸಹಕಾರ ಸಂಘಗಳು ತಮ್ಮ ಸದಸ್ಯರಿಂದ ನಿವೇಶನ ಮುಂಗಡವನ್ನು ಕಟ್ಟಿಸಿಕೊಂಡು, ಭೂ ಪರಿವರ್ತನೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ವರ್ಷಗಳೇ ಸಂದಿವೆ. ರಾಜಕೀಯ ಕಾರಣಗಳಿಗಾಗಿ ಸರ್ಕಾರ ಭೂ ಪರಿವರ್ತ

ನೆಗೆ ಅನುಮತಿ ನೀಡದೇ ಸತಾಯಿಸುತ್ತಿದೆ. ದಿನೇ ದಿನೇಹೆಚ್ಚಾಗುತ್ತಿರುವ ಕಟ್ಟಡ ನಿರ್ಮಾಣ ವೆಚ್ಚದಿಂದ ತಲೆಯ ಮೇಲೊಂದು ಸೂರು ನಿರ್ಮಿಸಿಕೊಳ್ಳಲು ಬಯಸುವ ಜನರು ಆತಂಕಪಡುತ್ತಿದ್ದಾರೆ. ರೇರಾ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾದ ಸರ್ಕಾರ, ಎಲ್ಲ ನೋಂದಾಯಿತ ಗೃಹನಿರ್ಮಾಣ ಸಹಕಾರ ಸಂಘಗಳ ಭೂಪರಿವರ್ತನಾ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕಾಗಿತ್ತು.

ಈಗಲೂ ಕಾಲಮಿಂಚಿಲ್ಲ. ಚುನಾವಣಾ ಆಯೋಗ, ವಿಧಾನಸಭಾ ಚುನಾವಣೆಗಳಿಗೆ ಅಧಿಸೂಚನೆ ಹೊರಡಿಸುವ ಮುನ್ನ, ಭೂಪರಿವರ್ತನೆಗೆ ಅನುಮತಿ ನೀಡುವ ಮೂಲಕ ಗೃಹ ನಿರ್ಮಾಣ ಸಹಕಾರ ಸಂಘಗಳ ಸದಸ್ಯರ ಹಿತ ಕಾಪಾಡಲಿ.

-ಕೊ.ಸು. ನರಸಿಂಹ ಮೂರ್ತಿ, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry