ನಾಳೆಯಿಂದ 11ರವರೆಗೆ ಹಕ್ಕಿ ಹಬ್ಬ

6

ನಾಳೆಯಿಂದ 11ರವರೆಗೆ ಹಕ್ಕಿ ಹಬ್ಬ

Published:
Updated:

ಮಂಗಳೂರು: ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ನೇತೃತ್ವದಲ್ಲಿ ನಗರದಲ್ಲಿ ಇದೇ 9ರಿಂದ 11ರವರೆಗೆ ಹಕ್ಕಿ ಹಬ್ಬ (ಬರ್ಡ್‌ ಫೆಸ್ಟಿವಲ್‌) ಆಯೋಜಿಸಲಾಗಿದೆ.

ರಂಗನತಿಟ್ಟು, ದಾಂಡೇಲಿ ಹಾಗೂ ಬಳ್ಳಾರಿಯಲ್ಲಿ ಈಗಾಗಲೇ ಯಶಸ್ವಿಯಾಗಿರುವ ಈ ಹಬ್ಬ, ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿದೆ. ಮಂಗಳೂರು ಸುತ್ತಮುತ್ತಲಿನ ಬೇರೆ ಬೇರೆ ಕಡೆಗಳಲ್ಲಿ ಹಕ್ಕಿಗಳ ವೀಕ್ಷಣೆಗೆ ಅವಕಾಶವಿದೆ. ಕೊನೆಯ ದಿನ ಸಮುದ್ರದಲ್ಲಿ ಸಂಚರಿಸಿ ಹಕ್ಕಿ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಳನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry