ಶುಕ್ರವಾರ, ಡಿಸೆಂಬರ್ 13, 2019
27 °C

‘ಮಠದ ವಿಷಯಕ್ಕೆ ಬಂದರೆ ಬೆಂಕಿಗೆ ಕೈ ಹಾಕಿದಂತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಠದ ವಿಷಯಕ್ಕೆ ಬಂದರೆ ಬೆಂಕಿಗೆ ಕೈ ಹಾಕಿದಂತೆ’

ಉಡುಪಿ: ‘ಸರ್ಕಾರ ಮಠ, ಮಂದಿರಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಬೆಂಕಿಗೆ ಕೈ ಹಾಕಿದಂತೆ’ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದ್ದಾರೆ.

‘ಸರ್ಕಾರಕ್ಕೆ ತನ್ನದೇ ಆದ ಅನೇಕ ಕಾರ್ಯಗಳಿವೆ. ಅದನ್ನು ಬಿಟ್ಟು ಧಾರ್ಮಿಕ ಸಂಸ್ಥೆಗಳಿಗೆ ಕೈ ಹಾಕಬಾರದು. ಮಠವನ್ನು ಧರ್ಮಾಧಿಕಾರಿಗಳೇ ನೋಡಿಕೊಳ್ಳುತ್ತಾರೆ. ಸರ್ಕಾರ ನಡೆಸಲಾಗದ ಅನೇಕ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸಿದ ಉದಾಹರಣೆಗಳಿವೆ. ಧರ್ಮ ಸಂಸ್ಥೆಗಳು

ಧರ್ಮ ಪ್ರಚಾರಕ್ಕೆ, ಭಕ್ತರಿಗೆ ಮಾರ್ಗದರ್ಶನಕ್ಕೆ ಮೀಸಲೇ ಹೊರತು ದುಡ್ಡು ಮಾಡುವುದಕ್ಕಲ್ಲ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸರ್ಕಾರ ಅಂತಹ ಕ್ರಮಕ್ಕೆ ಮುಂದಾದರೆ ಸಾರ್ವಜನಿಕರು ಪ್ರಬಲವಾಗಿ ವಿರೋಧಿಸುತ್ತಾರೆ. ಈ ಬಗ್ಗೆ ಜನಾಭಿಪ್ರಾಯ ಸಹ ಮೂಡಿಸಲಾಗುವುದು. ಈ ಹಿಂದೆ ಕೃಷ್ಣ ಮಠದ ವಿಷಯಕ್ಕೆ ಕೈ ಹಾಕಿ ಸುಟ್ಟುಕೊಂಡಿದ್ದಾರೆ. ಕೋರ್ಟ್ ಕೂಡ ಮಠದ ಪರವಾಗಿ ತೀರ್ಪು ನೀಡಿದೆ ಎಂಬುದನ್ನು ಮರೆಯಬಾರದು. ಸರ್ಕಾರ ತಪ್ಪು ಹೆಜ್ಜೆ ಇಡಬಾರದು, ದ್ವೇಷದ ರಾಜಕಾರಣ ಮಾಡುವುದು ಸಲ್ಲದು’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)