ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರ್ವಜನಿಕ ಅಭಿಪ್ರಾಯಕ್ಕೆ ನಾಡಧ್ವಜ’

Last Updated 8 ಫೆಬ್ರುವರಿ 2018, 9:48 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ನಂತರವೇ ನಾಡಧ್ವಜದ ವಿಚಾರದಲ್ಲಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾಹಿತಿ ನೀಡಿದರು.

ನಗರದಲ್ಲಿ ಬುಧವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದಲ್ಲಿ ಇದುವರೆಗೆ ಬಳಸುತ್ತಿರುವ ಹಳದಿ, ಕೆಂಪು ಬಣ್ಣದ ಧ್ವಜವೇ ಇರಲಿ ಎಂದು ಹಲವು ಕನ್ನಡ ಪರ ಸಂಘಟನೆಗಳು ಮನವಿ ಮಾಡಿವೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿ
ಸಲಾಗುವುದು ಎಂದರು.

ನಾಟಕ ಅಕಾಡೆಮಿ ಲಾಂಛನ ಬದಲಾವಣೆ ಮಾಡಿಲ್ಲ. ಫಲಕದ ವಿನ್ಯಾಸ ಬದಲಾವಣೆ ಕಾರಣಕ್ಕೆ ತಪ್ಪು ಕಲ್ಪನೆಯ ಸುದ್ದಿ ಪ್ರಸಾರವಾಗಿದೆ. ಹಿಂದೆ ಇದ್ದ ಲೋಗೊ ಉಳಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಮ್ಯಾ, ಜಗ್ಗೇಶ್ ಎಚ್ಚರಿಕೆ ವಹಿಸಲಿ: ‘ರಮ್ಯಾ ಹಾಗೂ ಜಗ್ಗೇಶ್ ಭಾಷೆ ಬಳಸುವಾಗ ಎಚ್ಚರಿಕೆ ವಹಿಸಬೇಕು. ಸಿನಿಮಾ ಪಾತ್ರಗಳೇ ಬೇರೆ. ರಾಜಕೀಯ ಕ್ಷೇತ್ರವೇ ಬೇರೆ. ಆರೋಪ, ಪ್ರತ್ಯಾರೋಪ ಸಹಜವಾದರೂ, ಪದ ಬಳಕೆಯಲ್ಲಿ ಜಾಗರೂಕರಾಗಿರಬೇಕು’ ಎಂದು ಕಿವಿಮಾತು ಹೇಳಿದರು.

ಮೋದಿ ಪ್ರಧಾನಿಯಾಗಿ ಮಾತನಾಡಲಿ: ‘ಪ್ರಧಾನಿ ಸ್ಥಾನದಲ್ಲಿ ಇರುವವರು ಆಧಾರರಹಿತವಾಗಿ ಮಾತನಾಡಬಾರದು. ಅದು ಅವರಿಗೆ ಶೋಭೆ ತರುವುದಿಲ್ಲ. ಮೋದಿ ಅವರು ಪರ್ಸಂಟೇಜ್, ನಂಗಾನಾಚ್‌ ಪದ ಬಳಕೆ ಮಾಡಿದ್ದು ಮನಸ್ಸಿಗೆ ನೋವು ತಂದಿದೆ’ ಎಂದರು.

‘ಈ ಬಾರಿಯೂ ತೇರದಾಳ ಕ್ಷೇತ್ರದಿಂದಲೇ ಸ್ಪರ್ಧಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT