ಬುಧವಾರ, ಡಿಸೆಂಬರ್ 11, 2019
15 °C

‘ಆಧಾರ್‌: ಒಂದು ದೇಶ, ಒಂದು ಗುರುತು ಎಂದರೆ ತಪ್ಪಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆಧಾರ್‌: ಒಂದು ದೇಶ, ಒಂದು ಗುರುತು ಎಂದರೆ ತಪ್ಪಲ್ಲ’

ನವದೆಹಲಿ: ‘ಆಧಾರ್‌ ಯೋಜನೆಯನ್ನು ‘ಒಂದು ದೇಶ, ಒಂದು ಗುರುತು’ ಎಂದು ಬಣ್ಣಿಸುವುದರಲ್ಲಿ ಯಾವುದೇ ತಪ್ಪು ಕಾಣಿಸುತ್ತಿಲ್ಲ. ಯಾಕೆಂದರೆ ನಾವೆಲ್ಲರೂ ಭಾರತೀಯರು’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಆಧಾರ್‌ ಯೋಜನೆಯನ್ನು ‘ಒಂದು ದೇಶ, ಒಂದು ಗುರುತು’ ಎಂದು ಹೇಳುತ್ತಿರುವುದರಿಂದಾಗಿ ಅದು ಇಲ್ಲದೆ ತಮ್ಮ ಗುರುತು ಸಾಬೀತುಪಡಿಸಲು ಜನರಿಗೆ ಕಷ್ಟವಾಗುತ್ತದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹೇಳಿದರು. ಆದರೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಈ ವಾದವನ್ನು ಒಪ್ಪಿಕೊಳ್ಳಲಿಲ್ಲ.

ಆದರೆ, ಸಿಬಲ್‌ ತಮ್ಮ ವಾದವನ್ನು ಕೈಬಿಡಲಿಲ್ಲ. ಜನರನ್ನು ಒಂದೇ ಗುರುತಿಗೆ ಸೀಮಿತಗೊಳಿಸಬಾರದು. ಆಧಾರ್‌ ಇಲ್ಲದವರಿಗೆ ನಾಗರಿಕ ಹಕ್ಕುಗಳೇ ಇಲ್ಲ ಎಂಬಂತಾಗಿದೆ. ಅವರನ್ನು ದೇಶವಿರೋಧಿಗಳನ್ನಾಗಿ ಚಿತ್ರಿಸಲಾಗುತ್ತಿದೆ ಎಂದು ಹೇಳಿದರು. ಅವರು ಗುರುವಾರವೂ ತಮ್ಮ ವಾದ ಮುಂದುವರಿಸಲಿದ್ದಾರೆ.

ಪ್ರತಿಕ್ರಿಯಿಸಿ (+)