ಮಂಗಳವಾರ, ಡಿಸೆಂಬರ್ 10, 2019
20 °C

ಮುಸ್ಲಿಮರಿಗೆ ಭಾರತದಲ್ಲಿರಲು ಹಕ್ಕಿಲ್ಲ: ಕಟಿಯಾರ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಸ್ಲಿಮರಿಗೆ ಭಾರತದಲ್ಲಿರಲು ಹಕ್ಕಿಲ್ಲ: ಕಟಿಯಾರ್

ನವದೆಹಲಿ: ‘ಭಾರತದಲ್ಲಿರಲು ಮುಸ್ಲಿಮರಿಗೆ ಹಕ್ಕಿಲ್ಲ. ಅವರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ನೆಲೆಸಬೇಕು’ ಎಂದು ಬಿಜೆಪಿ ಸಂಸದ ವಿನಯ್‌ ಕಟಿಯಾರ್ ಹೇಳಿದ್ದಾರೆ.

‘ಮುಸ್ಲಿಮರು ತಮ್ಮ ಜನಸಂಖ್ಯೆಯ ಆಧಾರದ ಮೇಲೆ ದೇಶ ವಿಭಜನೆ ಮಾಡಿದ್ದಾರೆ. ಹೀಗಾಗಿ ವಿಭಜನೆಗೆ ಅವರೇ ಹೊಣೆಯಾಗಿರುವುದರಿಂದ ಅವರು ಭಾರತದಲ್ಲಿರುವ ಅಗತ್ಯವಿಲ್ಲ’ ಎಂದು ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನೀಯರು ಎಂದು ಕರೆಯುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಸದ ಅಸಾದುದ್ದೀನ್‌ ಒವೈಸಿ ಅವರು ಮಂಗಳವಾರ ಲೋಕಸಭೆಯಲ್ಲಿ ನೀಡಿರುವ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)