ಕರ್ಣಾಟಕ ಬ್ಯಾಂಕ್ ಠೇವಣಿ ಬಡ್ಡಿ ದರ ಹೆಚ್ಚಳ

7

ಕರ್ಣಾಟಕ ಬ್ಯಾಂಕ್ ಠೇವಣಿ ಬಡ್ಡಿ ದರ ಹೆಚ್ಚಳ

Published:
Updated:

ಮಂಗಳೂರು: ಠೇವಣಿಗಳ ಮೇಲಿನ ಬಡ್ಡಿದರವನ್ನು ಕರ್ಣಾಟಕ ಬ್ಯಾಂಕ್ ಹೆಚ್ಚಿಸಿದ್ದು, ಜನವರಿ 30ರಿಂದ ಜಾರಿಗೆ ಬಂದಿದೆ.

1 ವರ್ಷದಿಂದ 449 ದಿನಗಳವರೆಗಿನ ₹10 ಕೋಟಿ ಮೊತ್ತದ ಠೇವಣಿಗಳಿಗೆ ಬಡ್ಡಿದರವನ್ನು ಶೇ 6.90 ದಿಂದ ಶೇ 7.10ಕ್ಕೆ ಹೆಚ್ಚಿಸಲಾಗಿದೆ. 451 ದಿನಗಳಿಂದ 2 ವರ್ಷದವರೆಗಿನ ₹10 ಕೋಟಿವರೆಗಿನ ಠೇವಣಿಗಳಿಗೂ ಶೇ 6.90 ದಿಂದ ಶೇ 7.10ಕ್ಕೆ ಹೆಚ್ಚಿಸಲಾಗಿದೆ.

450 ದಿನಗಳ ಹೊಸ ಠೇವಣಿಯನ್ನು ಪರಿಚಯಿಸಲಾಗಿದ್ದು, ಶೇ 7.25 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ₹ 5 ಕೋಟಿವರೆಗಿನ ಠೇವಣಿಗೆ ಹಿರಿಯ ನಾಗರಿಕರು ಹೆಚ್ಚುವರಿ ಶೇ 0.50 ಬಡ್ಡಿದರ ಪಡೆಯಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry