ಬುಧವಾರ, ಡಿಸೆಂಬರ್ 11, 2019
23 °C

ಅಪಘಾತ: ಪ್ರಧಾನಿ ಪತ್ನಿಗೆ ಗಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಅಪಘಾತ: ಪ್ರಧಾನಿ ಪತ್ನಿಗೆ ಗಾಯ

ಜೈಪುರ: ರಾಜಸ್ಥಾನದ ಚಿತ್ತೂರು ಜಿಲ್ಲೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಗಾಯಗೊಂಡಿದ್ದಾರೆ. ಚಿತ್ತೋರಗಡದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸಂಬಂಧಿ ಬಸಂತ್ ಭಾಯ್ ಮೋದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬುಧವಾರ ಬೆಳಿಗ್ಗೆ ಅವರು ಪ್ರಯಾಣಿಸುತ್ತಿದ್ದ ಇನೋವಾ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಚಾಲಕನ ಸಹಿತ ಏಳು ಜನ ಕಾರಿನಲ್ಲಿ ಇದ್ದರು. ಇವರೆಲ್ಲ ಬರಾನ್ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿ ಗುಜರಾತ್‌ಗೆ ವಾಪಸಾಗುತ್ತಿದ್ದರು.

ನರೇಂದ್ರ ಮೋದಿ ಅವರಿಂದ ದೂರವಾದ ನಂತರ ಜಶೋದಾ ತಮ್ಮ ಸೋದರ ಅಶೋಕ್ ಮೋದಿ ಅವರೊಂದಿಗೆ ನೆಲೆಸಿದ್ದಾರೆ.

ಪ್ರತಿಕ್ರಿಯಿಸಿ (+)