ಭಾನುವಾರ, ಡಿಸೆಂಬರ್ 8, 2019
25 °C

‘ಸ್ಮಾರ್ಟ್‌ ಸಿಟಿ’ಗೆ ಕೈಜೋಡಿಸಿದ ಟಾಟಾ ಮೋಟರ್ಸ್‌

Published:
Updated:
‘ಸ್ಮಾರ್ಟ್‌ ಸಿಟಿ’ಗೆ  ಕೈಜೋಡಿಸಿದ  ಟಾಟಾ ಮೋಟರ್ಸ್‌

ಬೆಂಗಳೂರು: ಟಾಟಾ ಮೋಟರ್ಸ್ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಕೈಜೋಡಿಸಿದೆ.

ಈ ಉದ್ದೇಶಕ್ಕೆ `ಸ್ಮಾರ್ಟ್ ಮೊಬಿಲಿಟಿ, ಸ್ಮಾರ್ಟ್ ಸಿಟೀಸ್’  ಪರಿಕಲ್ಪನೆಯ ಭವಿಷ್ಯದ ಯೋಜನೆಯನ್ನು ನವದೆಹಲಿಯಲ್ಲಿ ನಡೆಯುತ್ತಿರುವ ವಾಹನ ಮೇಳದಲ್ಲಿ ಪ್ರಕಟಿಸಿದೆ. ತನ್ನ ಗ್ರಾಹಕರಿಗೆ ಭವಿಷ್ಯದಲ್ಲಿ ಹೆಚ್ಚಿನ ಸುರಕ್ಷತೆ, ಅನುಕೂಲತೆ ಮತ್ತು ಸಮರ್ಥ ಸಾರಿಗೆ ವ್ಯವಸ್ಥೆಯನ್ನು ಹೇಗೆ ಕಲ್ಪಿಸಲಾಗುವುದು ಎಂಬುದನ್ನು ಸಂಸ್ಥೆ ಅಲ್ಲಿ ಪ್ರದರ್ಶಿಸುತ್ತಿದೆ.

ವಾಣಿಜ್ಯ ವಾಹನಗಳ ವಿಭಾಗದಲ್ಲಿ ಪರಿಚಯಿಸಿರುವ  ಹೊಸ ಟಾಟಾ ಇಂಟ್ರಾ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಎಸ್‍ಯುವಿ ವಿಭಾಗದಲ್ಲಿ ಹೊಸ ಭಾಷ್ಯ ಬರೆಯಲಿರುವ ಕಾಂಪ್ಯಾಕ್ಟ್ ಟ್ರಕ್  ಬಿಡುಗಡೆ ಮಾಡಲಾಗಿದೆ. ಸಂಸ್ಥೆಯ ವಾಣಿಜ್ಯ ವಾಹನಗಳ ಪ್ರಚಾರ ರಾಯಭಾರಿಯಾಗಿರುವ ಬಾಲಿವುಡ್‌ ನಟ ಅಕ್ಷಯ್‍ಕುಮಾರ್ ಅವರು ‘ ಟಾಟಾ ಇಂಟ್ರಾ’ವನ್ನು ಮಾರುಕಟ್ಟೆಗೆ ಪರಿಚಯಿಸಿದರು.

ಪ್ರತಿಕ್ರಿಯಿಸಿ (+)