ಬುಧವಾರ, ಡಿಸೆಂಬರ್ 11, 2019
24 °C

ಭಾರತ ಪುರುಷರ ತಂಡಕ್ಕೆ ಜಯ

Published:
Updated:
ಭಾರತ ಪುರುಷರ ತಂಡಕ್ಕೆ ಜಯ

ಅಲೊರ್ ಸೆಟರ್, ಮಲೇಷ್ಯಾ: ಕಿದಂಬಿ ಶ್ರೀಕಾಂತ್ ನಾಯಕತ್ವದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ 5–0 ಯಿಂದ ಮಾಲ್ಡೀವ್ಸ್‌ ವಿರುದ್ಧ ಜಯಿಸಿತು.

ದಿನದ ಮೊದಲ ಸಿಂಗಲ್ಸ್ ಪಂದ್ಯ ದಲ್ಲಿ ಶ್ರೀಕಾಂತ್ 21–5, 21–6ರಿಂದ ಶಹೀದ್ ಹುಸೇನ್ ಝಯನ್ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಬಿ. ಸಾಯಿಪ್ರಣೀತ್ 21–10, 21–4 ರಿಂದ ಅಹಮದ್ ನಿಬೈ ವಿರುದ್ಧ ಜಯಿಸಿದರು. ಕೇವಲ 17 ನಿಮಿಷಗ ಳಲ್ಲಿ ಸಾಯಿಪ್ರಣೀತ್ ಗೆದ್ದರು.

ಸಮೀರ್ ವರ್ಮಾ 21–5, 21–1ರಿಂದ ಮೊಹಮ್ಮದ್ ಅರ್ಸಲನ್ ಅಲಿ  ವಿರುದ್ಧ ಗೆದ್ದು, ತಂಡವು 3–0 ಮುನ್ನಡೆ ಸಾಧಿಸಲು ಕಾರಣರಾದರು.

ಡಬಲ್ಸ್‌ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಘ್ ಶೆಟ್ಟಿ ಜೋಡಿಯು 21–8, 21–8 ಗೇಮ್‌ಗಳಿಂದ ಶಾಹೀದ್ ಹುಸೇನ್ ಝಯನ್ ಮತ್ತು ಶಾಹೀಮ್ ಹಸನ್ ಅಫ್ಷೀಮ್ ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಎಂ.ಆರ್. ಅರ್ಜುನ್ ಮತ್ತು ಶ್ಲೋಕ ರಾಮಚಂದ್ರನ್ 21–2, 21–5 ರಿಂದ  ಮೊಹಮ್ಮದ್ ಅರ್ಸಲನ್ ಅಲಿ ಮತ್ತು ಅಹಮದ್ ನಿಬಾಲ್ ವಿರುದ್ಧ ಜಯಗಳಿಸಿದರು. ಭಾರತ ತಂಡವು ಗುರುವಾರ ಇಂಡೋನೆಷ್ಯಾ ವಿರುದ್ಧ ಆಡಲಿದೆ. ಮಹಿಳೆಯರ ತಂಡವು ಜಪಾನ್ ಎದುರು ಸೆಣಸಲಿದೆ.

ಪ್ರತಿಕ್ರಿಯಿಸಿ (+)