ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿಗೆ ಬಿನ್‌ ಅಳವಡಿಕೆ

Last Updated 7 ಫೆಬ್ರುವರಿ 2018, 20:36 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿಗೆ ಮತ್ತು ಬ್ಲಾಕ್‍ಸ್ಪಾಟ್‍ಗಳ (ಕಸ ಸುರಿಯುವ ಸ್ಥಳ) ನಿಯಂತ್ರಣಕ್ಕಾಗಿ ಭಾಗಶಃ ನೆಲಮಟ್ಟದ ದೊಡ್ಡ ಡಬ್ಬಿಗಳನ್ನು (ಬಿನ್‌) ಬಿಬಿಎಂಪಿ ಅಳವಡಿಸುತ್ತಿದೆ.

ದೊಮ್ಮಲೂರಿನ ಒಳವರ್ತುಲ ಮೇಲ್ಸೇತುವೆಯ ಬಳಿ ಈ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ವಾಣಿಜ್ಯ ಚಟುವಟಿಕೆಯ ಪ್ರದೇಶ, ಸಾರ್ವಜನಿಕ ಸ್ಥಳ ಹಾಗೂ ಟೆಂಡರ್ ಶ್ಯೂರ್ ರಸ್ತೆಗಳ ಪಕ್ಕದಲ್ಲಿ ಈ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದೆ. ಮೊದಲನೇ ಹಂತದಲ್ಲಿ 200 ಸ್ಥಳದಲ್ಲಿ ಹಸಿ ತ್ಯಾಜ್ಯಕ್ಕೆ 200 ಮತ್ತು ಒಣ ತ್ಯಾಜ್ಯಕ್ಕೆ 200 ಬಿನ್‌ಗಳನ್ನು ಅಳವಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಪಾಲಿಕೆ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌, ‘ನಗರದ ಪ್ರತಿಯೊಂದು ಭಾಗದಲ್ಲಿ ಎರಡು ಬಿನ್‌ಗಳು ಇರಲಿವೆ. ಇವು ಭರ್ತಿಯಾದ ಕೂಡಲೇ ಗುತ್ತಿಗೆದಾರರಿಗೆ ಸಂದೇಶ ರವಾನಿಸುವ ಸೆನ್ಸರ್‌ ವ್ಯವಸ್ಥೆ ಇದೆ. ಸಂದೇಶ ಸಿಕ್ಕಿದ ತಕ್ಷಣ ಕ್ರೇನ್ ಒಳಗೊಂಡ ಟ್ರಕ್ ಸ್ಥಳಕ್ಕೆ ಬಂದು ತ್ಯಾಜ್ಯ ಎತ್ತಿಕೊಂಡು ಹೋಗಲಿದೆ. ಇದಕ್ಕಾಗಿಯೇ 8 ಟ್ರಕ್‍ ಕಾರ್ಯನಿರ್ವಹಿಸಲಿವೆ. ನಿರ್ವಹಣೆ ಗುತ್ತಿಗೆಯನ್ನು 5 ವರ್ಷಗಳ ಅವಧಿಗೆ ಜೋಂಟಾ ಇನ್ಫ್ರಾಟೆಕ್ ಸಂಸ್ಥೆಗೆ ನೀಡಲಾಗಿದೆ’ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಬಿನ್‌ ಅಳವಡಿಸುತ್ತಿರುವ 12 ಸ್ಥಳಗಳು:

ರಾಜಭವನ ಆವರಣ

ವಿಧಾನಸೌಧ ಗೇಟ್‌ ಸಂಖ್ಯೆ 2

ಹೈಕೋರ್ಟ್ ಆವರಣ

ಎಂಎಸ್ ಬಿಲ್ಡಿಂಗ್ ಆವರಣ

ಕಬ್ಬನ್ ಪಾರ್ಕ್ (ಬಾಲ ಭವನ ಎದುರು)

ಕಬ್ಬನ್ ಪಾರ್ಕ್ (ಬಿಎಸ್‌ಎನ್‌ಎಲ್ ಕಚೇರಿ ಹತ್ತಿರ)

ಎಂ.ಜಿ ರಸ್ತೆ (ಕಿಡ್ಸ್ ಕೆಂಪ್)

ಜಾನ್ಸನ್ ಮಾರುಕಟ್ಟೆ

ಮೆಗ್ರಾತ್‌ ರಸ್ತೆ (ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣದ ಹಿಂದೆ)

ಆಸ್ಟಿನ್ ಟೌನ್ (ಆಂಜನೇಯ ಪ್ರತಿಮೆ ಹತ್ತಿರ)

ಆಸ್ಟಿನ್ ಟೌನ್ (ನಂದನ ಆವರಣದ ಎದುರು)

ರೇನಿಯಸ್ ರಸ್ತೆ (ನಂಜಪ್ಪ ವೃತ್ತ)

ಅಂಕಿ ಅಂಶ

200 -ಮೊದಲ ಹಂತದಲ್ಲಿ ತೊಟ್ಟಿ ಅಳವಡಿಸುವ ಸ್ಥಳಗಳು

‌400-ಅಳವಡಿಸುತ್ತಿರುವ ತೊಟ್ಟಿಗಳು

₹55.28 ಕೋಟಿ -ಯೋಜನೆಗೆ ವಿನಿಯೋಗಿಸುತ್ತಿರುವ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT