ರೈಲ್ವೆ ಸೇತುವೆಗೆ ಕಂಟೇನರ್‌ ಡಿಕ್ಕಿ: 2 ಗಂಟೆ ಹೆದ್ದಾರಿ ಬಂದ್

7

ರೈಲ್ವೆ ಸೇತುವೆಗೆ ಕಂಟೇನರ್‌ ಡಿಕ್ಕಿ: 2 ಗಂಟೆ ಹೆದ್ದಾರಿ ಬಂದ್

Published:
Updated:

ವಿಟ್ಲ: ಕಾರುಗಳನ್ನು ಸಾಗಣೆ ಮಾಡುತ್ತಿದ್ದ ಕಂಟೇನರ್ ಲಾರಿಯೊಂದು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರಿನಲ್ಲಿ ಬುಧವಾರ ಬೆಳಿಗ್ಗೆ ರೈಲ್ವೆ ಮೇಲುಸೇತುವೆಯ ಸೇಫ್ ಗಾರ್ಡ್‌ಗೆ ಡಿಕ್ಕಿ ಹೊಡೆದು ರಸ್ತೆ ಮಧ್ಯದಲ್ಲಿ ಸ್ಥಗಿತಗೊಂಡಿದ್ದರಿಂದ ಎರಡು ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತು.

ಮೈಸೂರು ಕಡೆಯಿಂದ ಕಂಟೇನರ್ ಲಾರಿ ಮಂಗಳೂರಿನತ್ತ ಹೋಗುತಿತ್ತು. ಮೇಲ್ಸೇತುವೆಯನ್ನು ದಾಟಿಕೊಂಡು ಮುಂದೆ ಹೋದಾಗ ಕಂಟೇನರ್‌ನ ಮೇಲ್ಭಾಗವು ರೈಲ್ವೆ ಸೇತುವೆಯ ರಕ್ಷಣಾ ನಿರ್ಮಾಣಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಕಬ್ಬಿಣದ ಬೀಮ್ ಲಾರಿಯ ಮೇಲೆ ಉರುಳಿ ಬಿದ್ದಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಲಾರಿಯನ್ನು ಚಾಲಕ ಹಿಂದೆ ಚಲಾಯಿಸಿದ್ದಾನೆ.

ಇದರಿಂದ ರಸ್ತೆಯ ಅಡ್ಡಕ್ಕೆ ನಿಂತುಬಿಟ್ಟಿತು. ಲಾರಿ ಮುಂಭಾಗ ರಸ್ತೆಯಿಂದ ಕೆಳಭಾಗಕ್ಕೆ ಇಳಿದು ಸಿಕ್ಕಿಹಾಕಿಕೊಂಡಿತ್ತು. ಹೀಗಾಗಿ ವಾಹನ ತೆರವುಗೊಳಿಸುವುದು ವಿಳಂಬವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry