ನರಿಕೊಂಬು: ಬ್ಯಾನರ್ ಹರಿದ ಕಿಡಿಗೇಡಿಗಳು

7

ನರಿಕೊಂಬು: ಬ್ಯಾನರ್ ಹರಿದ ಕಿಡಿಗೇಡಿಗಳು

Published:
Updated:

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ತಾಪ್ತಿಯಲ್ಲಿ ಸಚಿವ ಬಿ. ರಮಾಣಾಥ ರೈ ಅವರನ್ನು ಅಭಿನಂದಿಸಿ ಅಳವಡಿಸಿದ್ದ ಬ್ಯಾನರ್‌ಗಳನ್ನು  ಕಿಡಿ ಗೇಡಿಗಳ ಹರಿದು ಹಾಕಿದ್ದು, ಕ್ಷೇತ್ರದಲ್ಲಿ ಚುನಾವಾಣಾ ಪೂರ್ವ ರಾಜಕೀಯ ಗರಿಗೆದರಿದೆ.

ಸುಮಾರು ₹ 6 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಚಿವ ಬಿ.ರಮಾನಾಥ ರೈಯವರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಿದ್ದ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.

ಸಾಮೂಹಿಕ ಪ್ರಾರ್ಥನೆ: ಕಿಡಿಗೇಡಿ ಕೃತ್ಯ ವಿರುದ್ಧ ಇಲ್ಲಿನ ಕಾಂಗ್ರೆಸ್ ಮುಖಂಡರು ಮತ್ತು ಗ್ರಾಮಸ್ಥರು ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನಕ್ಕೆ ಬುಧವಾರ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದೇ ವೇಳೆ ಪಾಣೆಮಂಗಳೂರು ಶ್ರೀ ಸತ್ಯದೇವತಾ ಕಲ್ಲುರ್ಟಿ ಗುಡಿ, ಮೊಗರ್ನಾಡು ಅಬ್ಬಯಮಜಲು ಶ್ರೀ ಮಹಮ್ಮಾಯಿ ಸನ್ನಿಧಿ, ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನ, ನಾಟಿ ಕೋದಂಡರಾಮ ಭಜನಾ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಪ್ರಮುಖರಾದ ಪ್ರಕಾಶ್ ಕಾರಂತ, ಅಲ್ಫೋನ್ಸ್ ಮಿನೇಜಸ್, ಉಮೇಶ್ ಬೋಳಂತೂರು, ಅಲ್ಬರ್ಟ್‌ ಮಿನೇಜಸ್, ಲಕ್ಷ್ಮಣ ಕಲ್ಯಾಣಾಗ್ರಹಾರ, ಗಾಯತ್ರಿ, ರವೀಂದ್ರ ಸಪಲ್ಯ, ಕೃಷ್ಣಪ್ಪ ನಾಟಿ, ವಿಶ್ವನಾಥ ಕೊಡಂಗೆಕೋಡಿ, ರಮೇಶ ಬೋರುಗಡೆ, ಭರತ್ರಾಜ್, ದಿವಾಕರ, ಸುಂದರ ಏಳಬೆ, ಥೋಮಸ್ ಲಾರೆನ್ಸ್, ವಸಂತ ಶೆಟ್ಟಿ, ಸುಂದರ ಮಡಿವಾಳ, ಮಾಧವ ಕರ್ಬೆಟ್ಟು, ಯೋಗೀಶ್ ಪಣೋಲಿಬೈಲು, ಪ್ರವೀಣ್, ಅರುಣ ಶೆಟ್ಟಿ, ದೇಜಪ್ಪ, ರಾಜೇಶ್, ಕೇಶವ ಶಾಂತಿ, ಮೋನಪ್ಪ ಪೂಜಾರಿ, ಸಂಜೀವ ಸಪಲ್ಯ  ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry