ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಮೇಲೆ ಹಲ್ಲೆಗೆ ಖಂಡನೆ

Last Updated 8 ಫೆಬ್ರುವರಿ 2018, 5:54 IST
ಅಕ್ಷರ ಗಾತ್ರ

ತಿ.ನರಸೀಪುರ: ಧಾರವಾಡದಲ್ಲಿ ವಕೀಲ ಬಿ.ಐ.ದೊಡ್ಡಮನಿ ಅವರ ಮೇಲಿನ ಹಲ್ಲೆ ಖಂಡಿಸಿ ಪಟ್ಟಣದ ವಕೀಲರು ಮಂಗಳವಾರ ನ್ಯಾಯಾಲಯ ಕಲಾಪ ದಿಂದ ದೂರು ಉಳಿದು ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ನ್ಯಾಯಾಲಯದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.

ವಕೀಲರ ಸಂಘದ ಅಧ್ಯಕ್ಷ ಜಿ.ರವಿಶಂಕರ್, ವಕೀಲರ ಮೇಲೆ ದೌರ್ಜನ್ಯ ನಡೆಸುವ ಘಟನೆಗಳು ಹೆಚ್ಚುತ್ತಿ ರುವುದು ಆತಂಕಕಾರಿ ಬೆಳವಣಿಗೆ. ಭೂ ವ್ಯಾಜ್ಯಗಳ ಪರ ಹೋರಾಟ ನಡೆಸುತ್ತಿದ್ದ ವಕೀಲ ಬಿ.ಐ.ದೊಡ್ಡಮನಿ ಮೇಲೆ ಮಾರಾ ಣಾಂತಿಕ ಹಲ್ಲೆ ಖಂಡನೀಯ. ಸರ್ಕಾರ ಇಂತಹ ಪ್ರಕರಣಗಳ ಆರೋಪಿ ಗಳ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು ಹಾಗೂ ವಕೀಲರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ವಕೀಲರ ಸಂಘದ ಉಪಾಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ಸೋಸಲೆ ಜಗದೀಶ್, ಖಜಾಂಚಿ ಲಿಂಗಣ್ಣ, ಸಂಘಟನಾ ಕಾರ್ಯದರ್ಶಿ ಶಾಂತ ನಾಗರಾಜು, ವಕೀಲರಾದ ಭುವನೇಶ್, ಶಂಭುಲಿಂಗಸ್ವಾಮಿ, ರಾಜಣ್ಣ, ಬಿ.ರಾಜು, ರಮೇಶ್, ಮಹೇಶ, ಸುಚಿತ್ರಾ, ಹೆಚ್ಎನ್ಬಿ ನಿಧಿ, ನಾಗರಾಜಸ್ವಾಮಿ, ಕುಮಾರ್, ಜಯರಾಮು, ಬಸವರಾಜು, ಮಹದೇವಸ್ವಾಮಿ, ಕೈಯಂಬಳ್ಳಿ ಉಮೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT