ಭಾನುವಾರ, ಡಿಸೆಂಬರ್ 8, 2019
24 °C

ಇದು ಹುಚ್ಚರ ಸರಕಾರ, ಸರಕಾರಕ್ಕೆ ಮಿನಿಮಂ ಕಾಮನ್‌ಸೆನ್ಸ್‌ ಇದೆಯಾ? – ವಿ.ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಹುಚ್ಚರ ಸರಕಾರ, ಸರಕಾರಕ್ಕೆ ಮಿನಿಮಂ ಕಾಮನ್‌ಸೆನ್ಸ್‌ ಇದೆಯಾ? – ವಿ.ಸೋಮಣ್ಣ

ಹಾಸನ: ಮಠ ಮಾನ್ಯಗಳಿಗೆ ಸರಕಾರ ಕಡಿವಾಣ ಹಾಕುವ ವಿಚಾರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಸರಕಾರಕ್ಕೆ ಮಿನಿಮಂ ಕಾಮನ್‌ಸೆನ್ಸ್‌ ಇದೆಯಾ? ವಿಧಾನ ಪರಿಷತ್ ಸದಸ್ಯ  ವಿ.ಸೋಮಣ್ಣ ಕಿಡಿಕಾರಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿ. ಸೋಮಣ್ಣ ಅವರು, ಇದು ಹುಚ್ಚರ ಸರಕಾರ. ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ. ಇದು ರಾಜ್ಯದಲ್ಲಿ ಶಾಂತಿ ಕದಡುವ ಯತ್ನ. ಸಿಎಂ ಅವರು ರಾಜ್ಯದ ಖಳನಾಯಕರಾಗಲು ಹೊರಟಿದ್ದಾರೆ. ಇಂತಹ ಪಾಪದ ಚಿಂತನೆ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲೆಸೆದಿದ್ದಾರೆ.

ಸಚಿವ ಎ.ಕೃಷ್ಣಪ್ಪ ಹಾಗೂ ಪುತ್ರ ಬಿಜೆಪಿಗೆ ಬರುವ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರು ಬಂದರೂ, ಬಾರದೇ ಇದ್ದರೂ ನನಗೆ ಯಾವ ಸಮಸ್ಯೆಯೂ ಆಗದು. ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಖಾತೆ ತೆರೆಯಲು ಸಂಘಟಿತ ಪ್ರಯತ್ನ ನಡೆಯುತ್ತಿದ್ದು ಶುಕ್ರವಾರದಿಂದ ಎರಡನೇ ಹಂತದ ಯಾತ್ರೆ ಆರಂಭವಾಗಲಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

 

ಪ್ರತಿಕ್ರಿಯಿಸಿ (+)