ಮದಕರಿನಾಯಕ, ನಾಲ್ವಡಿ ಸ್ಮರಿಸದ ಪ್ರಧಾನಿ: ಆರೋಪ

7

ಮದಕರಿನಾಯಕ, ನಾಲ್ವಡಿ ಸ್ಮರಿಸದ ಪ್ರಧಾನಿ: ಆರೋಪ

Published:
Updated:

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಮದಕರಿ ನಾಯಕರ ಕೊಡುಗೆಯನ್ನು ಸ್ಮರಿಸಲಿಲ್ಲವೆಂದು ಆರೋಪಿಸಿ ವಾಲ್ಮೀಕಿ ನಾಯಕರ ಯುವ ವೇದಿಕೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ ಅವರು ಕನ್ನಡದಲ್ಲಿ ಮಾತನಾಡಿದ್ದನ್ನು ವೇದಿಕೆ ಸ್ವಾಗತಿಸುತ್ತದೆ. ಹಲವು ಗಣ್ಯರು, ನಾಯಕರನ್ನು ನೆನೆದಿರುವುದು ಸಂತೋಷದ ಸಂಗತಿ. ಆದರೆ, ನವ ಕರ್ನಾಟಕದ ಹರಿಕಾರ ನಾಲ್ವಡಿ ಅವರನ್ನು ಮರೆತದ್ದು ನೋವುಂಟು ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

ಕೆ.ಆರ್‌.ಎಸ್‌ ಅಣೆಕಟ್ಟೆಯನ್ನು ನಾಲ್ವಡಿ ನಿರ್ಮಿಸದೇ ಇದ್ದರೆ ಕರ್ನಾಟಕದ ಚಿತ್ರಣ ಭಿನ್ನವಾಗಿರುತ್ತಿತ್ತು. ಅರಮನೆಯ ಚಿನ್ನಾಭರಣ ಒತ್ತೆಯಿಟ್ಟು ಜಲಾಶಯ ನಿರ್ಮಿಸಿ ರೈತರಿಗೆ ಬೆಳಕಾಗಿದ್ದಾರೆ. ಮದಕರಿ ನಾಯಕರ ತ್ಯಾಗವೂ ಸ್ಮರಣೀಯ. ಈ ಇಬ್ಬರನ್ನೂ ನಿರ್ಲಕ್ಷಿಸಿದ್ದು ರಾಜಕೀಯ ಪಿತೂರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry