ಮಹಿಳೆಯರು ಜನ ಕರ್ನಾಟಕ ಸಂಘಟನೆಗೆ ಶಕ್ತಿ ತುಂಬಬೇಕು: ರಮೇಶ್ ಶೆಟ್ಟಿ

7

ಮಹಿಳೆಯರು ಜನ ಕರ್ನಾಟಕ ಸಂಘಟನೆಗೆ ಶಕ್ತಿ ತುಂಬಬೇಕು: ರಮೇಶ್ ಶೆಟ್ಟಿ

Published:
Updated:

ಉಡುಪಿ: ಅನ್ಯಾಯದ ವಿರುದ್ಧ ಹೋರಾಟ ಮಾಡಲು ಮಹಿಳೆಯ ಸಹ ಸಂಘಟಿತರಾಗಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ರಮೇಶ್ ಶೆಟ್ಟಿ ಹೇಳಿದರು. ಬೈಂದೂರಿನ ಶೀರೂರು ಪೇಟೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ಶೀರೂರು ಪೇಟೆ ಮಹಿಳಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಒಗ್ಗಟ್ಟಿನಿಂದ ಹೋರಾಡಿದರೆ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು. ಮಹಿಳೆಯರು ಒಂದಾಗಿ ಜಯಕರ್ನಾಟಕ ಸಂಘಟನೆಯನ್ನು ಬಲಪಡಿಸಬೇಕು. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ಸಹ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮ ಸಂಘಟಕರಲ್ಲಿ ಒಬ್ಬರಾದ ಸಂಧ್ಯಾ ವಿಶ್ವಾನಾಥ್ ಅವರನ್ನು ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಶೀರೂರು ಪೇಟೆ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಪುಷ್ಪಾ ರಘುರಾಮ್, ಪ್ರಧಾನ ಕಾರ್ಯದರ್ಶಿಯಾಗಿ ನಯನ ಪೂಜಾರಿ ಆಯ್ಕೆಯಾದರು.

ಜಯಕರ್ನಾಟಕ ಸಂಘಟನೆಯ ಗೌರವ ಸಲಹೆಗಾರರಾದ ಸುಧಾಕರ ರಾವ್, ಕಾರ್ಯಧ್ಯಕ್ಷರಾದ ಕರುಣಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮಿನ್, ಪ್ರಧಾನ ಸಂಚಾಲಕ ಅಣ್ಣಪ್ಪ ಕುಲಾಲ್ ಹೆಬ್ರಿ, ಉಪಾಧ್ಯಕ್ಷರಾದ ಶಶಿಕಾಂತ್ ಶೆಟ್ಟಿ, ಶರತ್ ಶೆಟ್ಟಿ ಕುಂದಾಪುರ, ದಿನಕರ ಶೆಟ್ಟಿ ಬಸ್ರೂರು, ಸುಬ್ರಮಣ್ಯ ಪೂಜಾರಿ, ಮಾಣಿಕ್ಯ ಹೋಬಳಿದಾರ್, ಹೇಮಾ ಪಂದುಬೆಟ್ಟು, ಜ್ಯೋತಿ ಸಂತೆಕಟ್ಟೆ, ಬೈಂದೂರು, ಫಯಾಜ್ ಬೈಂದೂರು, ಜಯಶ್ರೀ ಶಿವರಾಂ ಉದ್ಯಾವರ, ಕರುಣಾಕರ ಮಾರ್ಪಳ್ಳಿ, ಮಾದ್ಯಮ ವಕ್ತಾರ ಗಣೇಶ್ ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry