ಕುಸ್ತಿ ಕ್ರೀಡೆ ಉಳಿಸಲು ಪಣ ತೊಡಿ

7

ಕುಸ್ತಿ ಕ್ರೀಡೆ ಉಳಿಸಲು ಪಣ ತೊಡಿ

Published:
Updated:
ಕುಸ್ತಿ ಕ್ರೀಡೆ ಉಳಿಸಲು ಪಣ ತೊಡಿ

ಬಾದಾಮಿ: ‘ಪ್ರತಿಯೊಂದು ಗ್ರಾಮದಲ್ಲಿ ಮೊದಲು ಗರಡಿ ಮನೆಗಳಿದ್ದವು. ಯುವಕರು ಪ್ರತಿ ದಿನ ವ್ಯಾಯಾಮ ಹಾಗೂ ಕುಸ್ತಿ ಆಡಲು ಹೋಗುತ್ತಿದ್ದರು. ಈಗ ಗರಡಿ ಮನೆಗಳು ಮಾಯವಾಗಿವೆ. ಯುವಕರು ಕುಸ್ತಿ ಕ್ರೀಡೆಯನ್ನು ಉಳಿಸಬೇಕು’ ಎಂದು ಮಾಜಿ ಶಾಸಕ ಜಿ.ಎಸ್‌. ನ್ಯಾಮಗೌಡ ಹೇಳಿದರು.

ಇಲ್ಲಿನ ವೀರಪುಲಿಕೇಶಿ ಬ್ಯಾಂಕಿನ ಸುವರ್ಣ ಮಹೋತ್ಸವ ಅಂಗವಾಗಿ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಅವರು ಪುರುಷರ ಮತ್ತು ಮಹಿಳೆಯರ ಕುಸ್ತಿ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕುಸ್ತಿ ಆಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರಲು ಸಾಧ್ಯ. ಆಟವನ್ನು ಆಡುವು ದರಿಂದ ಕೆಟ್ಟ ಹವ್ಯಾಸದಿಂದ ದೂರ ಉಳಿಯಬಹುದು ಎಂದು ತಾವು ಚಿಕ್ಕವರಿದ್ದಾಗ ಗರಡಿ ಮನೆಗೆ ಹೋದ ಪ್ರಸಂಗವನ್ನು ಸ್ಮರಿಸಿಕೊಂಡರು.

ಬಾಗಲಕೋಟೆ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿದ್ದರು. ಕುಸ್ತಿ ವೀರಪುಲಿಕೇಶಿ ಬ್ಯಾಂಕಿನ ಸುವರ್ಣ ಮಹೋತ್ಸವ ಗೌರವ ಅಧ್ಯಕ್ಷ ಎ.ಸಿ. ಪಟ್ಟಣದ ಮಾರುತಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.

ಬಾಲಕ ಮುತ್ತು ಹಾಗೂ ಬಾಲಕಿ ಪುಷ್ಪ ಅವರಿಂದ ಕುಸ್ತಿಯನ್ನು ಆರಂಭಿಸ ಲಾಯಿತು. ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯ ಶರಣಬಸಪ್ಪ ಹಂಚಿನಮನಿ, ಎಫ್‌.ಆರ್‌. ಪಾಟೀಲ, ಐ.ಕೆ. ಪಟ್ಟಣಶೆಟ್ಟಿ ಮತ್ತಿತರರು ಇದ್ದರು.

ಕುಸ್ತಿ ಪಟುಗಳಿಗೆ ಹುರುದುಂಬಿಸಲು ಪ್ರೇಕ್ಷಕರು ಕೇಕೇ, ಚಪ್ಪಾಳೆ ಹಾಕಿ ಪ್ರೋತ್ಸಾಹಿಸಿದರು. ಪುರುಷರ ಸ್ಪರ್ಧೆಯಲ್ಲಿ ಕಾರ್ತಿಕ ಖಾಟೆ (ಪ್ರಥಮ) ದಾವಣಗೆರೆ, ಸಚಿನ ಜಮಾದಾರ (ದ್ವಿತೀಯ) ಕೊಲ್ಲಾಪುರ, ಸಂಬಾಜಿ ಸುಡಕೆ (ತೃತೀಯ) ಸಾಂಗಲಿ ಪ್ರಶಸ್ತಿ ಪಡೆದರು. ಮಹಿಳೆಯರ ಸ್ಪರ್ಧೆಯಲ್ಲಿ ಪ್ರೇಮಾ ಹುಚ್ಚನ್ನವರ (ಪ್ರಥಮ), ಅನೈಕಾ ಹಳಿಯಾಳ (ದ್ವಿತೀಯ), ಶಾಹೀದಾ ವೆಂಕಟಾಪೂರ (ತೃತೀಯ) ಬಹುಮಾನ ಪಡೆದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry