ಶುಕ್ರವಾರ, ಡಿಸೆಂಬರ್ 6, 2019
25 °C

ಅಕಾಲಿಕ ಮಳೆ, ಸಂಚಾರಕ್ಕೆ ಅಡೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕಾಲಿಕ ಮಳೆ, ಸಂಚಾರಕ್ಕೆ ಅಡೆತಡೆ

ದೇವನಹಳ್ಳಿ: ನಗರದಲ್ಲಿ ಸಂಜೆ ಸುರಿದ ಅಕಾಲಿಕ ಮಳೆಯಿಂದ ವಾಹನ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆ ನೀರು ರಸ್ತೆ ನೀರು ರಭಸವಾಗಿ ಹರಿದ ಕಾರಣ ವಾಹನಗಳು ಸಂಚರಿಸಲು ಸಾಧ್ಯವಾಗದೆ, ಸಾಲುಗಟ್ಟಿ ನಿಂತಿದ್ದವು.

ಬುಧವಾರ ತರಕಾರಿ ಖರೀದಿಸಲು ಸಂತೆಗೆ ಬಂದಿದ್ದ ಗ್ರಾಹಕರಿಗೆ ಸತತ ಒಂದು ಗಂಟೆ ಸುರದ ಮಳೆಯಿಂದಾಗಿ ವ್ಯಾಪಾರ ಮಾಡಲು ತೊಂದರೆಯಾಯಿತು. ಅಲಲ್ಲಿ ರಾಶಿ ಹಾಕಿದ್ದ ತರಕಾರಿ, ಸೊಪ್ಪುಗಳು ಮಳೆ ನೀರಿನಲ್ಲಿ ತೇಲಿ ಹೋದವು.

ಮಾರಾಟಗಾರರ ಪರದಾಟ ಹೇಳತೀರದಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಮತ್ತು ಗುಂಡಿಗಳು ಮಳೆ ನೀರಿನಿಂದ ಭರ್ತಿಯಾಗಿ ನೀರು ಹೊರಬರುತ್ತಿದ್ದುದರಿಂದ ಕೆಲ ವಾಹನ ಸವಾರರು ಬಿದ್ದೇಳುತ್ತಿದ್ದರು.

ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಟೋಲ್ ಗೇಟ್ ಬಳಿ ಅಪಾರ ಪ್ರಮಾಣದ ನೀರು ನಿಂತ ಪರಿಣಾಮ ನೂರಾರು ಕಾರುಗಳು ರಸ್ತೆ ಬದಿಯಲ್ಲೇ ನಿಂತಿದ್ದವು. ಮಳೆ ಕಡಿಮೆಯಾದ ನಂತರ ವಾಹನಗಳ ಸಂಚಾರ ಯಥಾಸ್ಥಿತಿಗೆ ಬಂತು.

ಪ್ರತಿಕ್ರಿಯಿಸಿ (+)