ಶುಕ್ರವಾರ, ಡಿಸೆಂಬರ್ 6, 2019
24 °C

ರೈತನ ಕೈ ಹಿಡಿದ ಸಾಸಿವೆ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತನ ಕೈ ಹಿಡಿದ ಸಾಸಿವೆ ಬೆಳೆ

ಸಿರುಗುಪ್ಪ : ತಾಲ್ಲೂಕಿನ ದೇಶನೂರು ಗ್ರಾಮದ ರೈತ ಪಿ.ಸತ್ಯನಾರಾಯಣ ಅವರ 17 ಎಕರೆ ಜಮೀನಿನಲ್ಲಿ ಬನರಾಸಿ ತಳಿಯ ಸಾಸಿವೆ ಬೆಳೆದಿದ್ದು, ಫಸಲು ಸಮೃದ್ಧಿಯಾಗಿ ಬೆಳೆದು ಹಳದಿ ಬಣ್ಣದ ಹೂಗಳಿಂದ ದಾರಿಹೋಕರ ಕಣ್ಮನ ಸೆಳೆಯುತ್ತಿದೆ.

‘ರೈತರು ಮಾರುಕಟ್ಟೆಯಲ್ಲಿ ದೊರೆಯುವ ಅಡುಗೆಗೆ ಬಳಸುವ ಸಾಸಿವೆಯ ಬಳಸದೆ ಎಣ್ಣೆ ಅಂಶ ಹೆಚ್ಚಿರುವ ಬನರಾಸಿ ತಳಿಯನ್ನು ಬಿತ್ತನೆಗೆ ಬಳಸಿದಲ್ಲಿ ಹೆಚ್ಚಿನ ಬೆಲೆ ಪಡೆಯಬಹುದಾಗಿದೆ. ನೀರಿಲ್ಲದೇ ಭತ್ತವನ್ನು ಬೆಳೆಯಲಾಗದೆ ಜಮೀನನ್ನು ಖಾಲಿಯಾಗಿ ಬಿಡುವ ಬದಲಿಗೆ ₹100ಗೆ 1ಕೆ.ಜಿ.ಸಾಸುವೆ ಬೀಜ ತಂದು ಎರಚಿದಲ್ಲಿ ಕ್ವಿಂಟಲ್‌ಗೆ ₹ 4ಸಾವಿರ ದೊರೆಯಲಿದೆ’ ಎಂದು ರೈತ ಪಿ.ಸತ್ಯನಾರಾಯಣ ಹೇಳಿದರು.

ಸಿರುಗುಪ್ಪ ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥ ಬಸವಣ್ಣೆಪ್ಪ ಫಸಲು ವೀಕ್ಷಿಸಿ ಮಾತನಾಡಿ,‘ ಸಾಸುವೆ ಬೆಳೆಗೆ ಹೆಚ್ಚಾಗಿ ಕೀಟ ಮತ್ತು ರೋಗ ಬಾಧಿಸುವುದಿಲ್ಲ. ಒಂದು ವೇಳೆ ರಸ ಹೀರುವ ಕೀಟ ಕಾಣಿಸಿಕೊಂಡಲ್ಲಿ ಇಮಿಡಾ ಕ್ಲೋಪಿಡ್ 1ಲೀ.ನೀರಿಗೆ 0.5ಎಂ.ಎಲ್ ಅಥವಾ ಡೈಮಿಥೋಯಟ್ ಕೀಟ ನಾಶಕವನ್ನು 1ಲೀ.ನೀರಿಗೆ 1.75ಎಂ.ಎಲ್ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)